DistrictsPolitics

ನಾನು ಹೈಕಮಾಂಡ್‌ ನಾಯಕರ ಮಾತಿಗೆ ತಲೆಬಾಗಬೇಕಾಯಿತು; ಡಿ.ಕೆ.ಶಿವಕುಮಾರ್

ರಾಮನಗರ; ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದರ ಬಗ್ಗೆ ಹಾಗೂ ಮುಂದೆ ಈ ಸ್ಥಾನಕ್ಕೇರುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿದ್ದಾರೆ. ಕನಕಪುರದಲ್ಲಿ ನಡೆದ ಮತದಾರರರಿಗೆ ಕೃತಜ್ಞತಾ ಸಮಾವೇಶದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ನೀವು ನಾನು ಮುಖ್ಯಮಂತ್ರಿಯಾಗಬೇಕೆಂಬ ಬಯಕೆಯಿಂದ ನನ್ನನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿದಿರಿ. ಆದ್ರೆ ಹೈಕಮಾಂಡ್‌ ಒಂದು ನಿರ್ಣಯ ಕೈಗೊಂಡಿತು. ಅದಕ್ಕೆ ನಾನು ತಲೆಬಾಗಲೇಬೇಕಾಯಿತು. ಆದ್ರೆ, ನಿಮ್ಮ ಬಯಕೆ ವ್ಯರ್ಥವಾಗುವುದಿಲ್ಲ. ಕಾಯಬೇಕು ಅಷ್ಟೇ ಎಂದು ಹೇಳಿದ್ದಾರೆ.

ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್‌ ಏನು ಹೇಳುತ್ತದೋ ನಾನು ಅದನ್ನು ಮಾಡುತ್ತೇನೆ. ಸಿಎಂ ವಿಚಾರದಲ್ಲೂ ಹೈಕಮಾಂಡ್‌ ನಿರ್ಧಾರ ತೆಗೆದುಕೊಂಡಿದೆ. ರಾಹುಲ್‌ ಗಾಂಧಿ, ಸೋನಿಯಾಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ನನಗೆ ಕಿವಿ ಮಾತು ಹೇಳಿದ್ದಾರೆ. ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವರ ಮಾತುಗಳಿಗೆ ತಲೆಬಾಗಲೇಬೇಕಾಯಿತು.

ಹೈಕಮಾಂಡ್‌ ಹೇಳಿದ್ದರಿಂದ ನಾನು ತಾಳ್ಮೆಯಿಂದ ಇರಬೇಕಾಯಿತು. ತಾಳ್ಮೆಯಿಂದ ಇದ್ದೇನೆ. ನಾನು ಕಾಯುತ್ತೇನೆ. ನಿಮ್ಮೆಲ್ಲರ ಬಯಕೆ ಈಡೇರುತ್ತದೆ. ಮುಂದೆ ನೋಡೋಣ.ಈ ಕ್ಷಣದಲ್ಲಿ ನಾನು ನಿಮಗೆ ಇದನ್ನು ಮಾತ್ರ ಹೇಳಲು ಬಯಸುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Share Post