Districts

ದಾರಿ ಮಧ್ಯೆ ಹುಲಿ ಹಾಗೂ ಎರಡು ಮರಿ; ದೃಶ್ಯ ಸೆರೆ ಹಿಡಿದ ಪ್ರಯಾಣಿಕರು

ಚಾಮರಾಜನಗರ; ಬಂಡಿಪುರ ಅಭಯಾರಣ್ಯದಲ್ಲಿ ಮರಿಗಳೊಂದಿಗೆ ತಾಯಿ ಹುಲಿ ಪ್ರತ್ಯಕ್ಷವಾಗಿದೆ. ರಸ್ತೆ ಮಧ್ಯೆ ಹುಲಿ ಮರಿಗಳೊಂದಿಗೆ ಓಡಾಡುತ್ತಿರುವುದು ಕಂಡುಬಂದಿದ್ದು, ಪ್ರಯಾಣಿಕರು ಆ ದೃಶ್ಯ ಸೆರೆ ಹಿಡಿದಿದ್ದಾರೆ.

ಊಟಿಗೆ ಹಾದು ಹೋಗುವ ಕಾಡಿನ ಮಾರ್ಗ ಮಧ್ಯ ಹುಲಿ ಕಣ್ಣಿಗೆ ಬಿದ್ದಿದೆ. ತಾಯಿ ಜೊತೆ ಎರಡು ಮರಿ ಹುಲಿಗಳನ್ನು ಕಂಡು ಪ್ರವಾಸಿಗರು ಮತ್ತು ಪ್ರಯಾಣಿಕರು ರೋಮಾಂಚನಗೊಂಡರು. ಹುಲಿ ಹಾಗೂ ಮರಿಗಳನ್ನು ತಮ್ಮ ಕ್ಯಾಮರಾ ಮೂಲಕ ಫೋಟೋ ತೆಗೆದುಕೊಂಡ ವೀಕ್ಷಕರು. ಮರಿಗಳೊಂದಿಗೆ ತಾಯಿರಸ್ತೆಗೆ ಅಡ್ಡಲಾಗಿ ಬಂದ ತಾಯಿ ಹುಲಿ ಅಪರೂಪದ ದೃಶ್ಯ ಪ್ರಯಾಣಿಕರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share Post