CrimeDistricts

ಹೆತ್ತ ತಂದೆ-ತಾಯಿಗೇ ವಿಷವಿಕ್ಕಿ ಕೊಂದ ಪಾಪಿ..!

ಹಾಸನ; ಇದಕ್ಕಿಂತ ಹೃದಯ ವಿದ್ರಾವಕತೆ ಮತ್ತೊಂದು ಸಿಗಲ್ಲ ಅನಿಸುತ್ತೆ. ಯಾಕಂದ್ರೆ ಇಲ್ಲಿ ಮಗನೇ ಹೆತ್ತ-ತಂದೆ ತಾಯಿಗಳಿಗೆ ವಿಷವಿಕ್ಕಿ ಕೊಂದಿದ್ದಾನೆ. ಇಂತಹದ್ದೊಂದು ದಾರುಣ ಕೃತ್ಯ ಅರಕಲಗೂಡಿನ ಬಿಸಿಲಹಳ್ಳಿಯಲ್ಲಿ ನಡೆದಿದೆ.

ಉಮಾ ಹಾಗೂ ನಂಜುಂಡಪ್ಪ ಎಂಬುವವರೇ ಸ್ವಂತ ಮಗನಿಂದ ಕೊಲೆಗೀಡಾದ ದುರ್ದೈವಿಗಳು. ಮಗ ಮಂಜುನಾಥ್‌ ಎಂಬಾತ ಪಲಾವ್‌ನಲ್ಲಿ ವಿಷ ಬೆರೆಸಿ ಕೊಲೆ ಮಾಡಿದ್ದಾನೆ. ಮೊದಲಿಗೆ ಪಲಾವ್‌ ತಾನೇ ತಿಂದಿದ್ದ ಆರೋಪಿ, ಅನಂತರ ಅದಕ್ಕೆ ಕಳೆನಾಶಕ ಬೆರೆಸಿ, ಅದನ್ನು ತಂದೆ-ತಾಯಿಗೆ ಕೊಟ್ಟಿದ್ದಾನೆ. ಅವರಿಬ್ಬರೂ ತಿಂದ ಮೇಲೆ ಔಷಧಿ ವಾಸನೆ ಬರುತ್ತಿದೆ ಎಂದು ನಾಟಕವಾಡಿ, ವಾಂತಿ  ಮಾಡಿದ್ದಾನೆ. ಅನಂತರ ಇಬ್ಬರಿಗೂ ಚಿಕಿತ್ಸೆ ಕೊಡಿಸುತ್ತೇನೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ವಾಪಸ್‌ ಕರೆತಂದಿದ್ದಾನೆ. ಅನಂತರ ಇಬ್ಬರೂ ಸತ್ತುಹೋಗಿದ್ದಾರೆ.

ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಆರೋಪಿ ಮಂಜುನಾಥ್‌ ಸಹೋದರ ಕೊಣನೂರು ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಅಂತ್ಯಕ್ರಿಯೆ ತಡೆದು ಮೃತದೇಹಗಳನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಆರೋಪಿ ಮಂಜುನಾಥ್‌ ವಿಷ ಬೆರೆಸಿ ಕೊಟ್ಟಿದ್ದಾಗ ಒಪ್ಪಿಕೊಂಡಿದ್ದಾನೆ.

ಆರೋಪಿ ವಿಧವೆಯೊಬ್ಬಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇನ್ನು ತಾಯಿಯನ್ನು ಪೀಡಿಸಿ ಸಹಕಾರ ಸಂಘಗಳಿಂದ ಸಾಲ ಪಡೆದುಕೊಂಡು ವಾಪಸ್‌ ಕಟ್ಟಿರಲಿಲ್ಲ. ಅದನ್ನು ವಾಪಸ್‌ ಕೇಳಿದ್ದಕ್ಕೆ ಆರೋಪಿ ಹೆತ್ತವರನ್ನೇ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

 

Share Post