CrimeDistricts

ಶಾಲಾ ಸಿಬ್ಬಂದಿ ಹೊಡೆತಕ್ಕೆ ಅಸ್ವಸ್ಥನಾದ ಬಾಲಕ:ದೂರು ದಾಖಲು

ದಕ್ಷಿಣ ಕನ್ನಡ: ಶಾಲೆಯಲ್ಲಿ ಮಕ್ಕಳಿಗೆ ಮನಬಂದಂತೆ ಥಳಿಸುವ ಅಧಿಕಾರ ಶಿಕ್ಷಕರಿಗೇ ಇರುವುದಿಲ್ಲ. ಅಂಥದ್ರಲ್ಲಿ ಓರ್ವ ಆಡಳಿತ ಮಂಡಳಿ ಸದಸ್ಯ ಮೂರನೇ ತರಗತಿ ಬಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ಆತ ಕೊಟ್ಟಿರುವ ದೊಣ್ಣೆ ಏಟಿಗೆ ವಿದ್ಯಾರ್ಥಿ ಅಸ್ವಸ್ಥನಾಗಿ ಆಸ್ಪತ್ರೆ ಸೇರಿದ್ದಾನೆ.

ಹೌದು 3ನೇ ತರಗತಿಯ ಬಾಲಕನಿಗೆ ಶಾಲಾ ಆಡಳಿತ ಮಂಡಳಿಯ ಸದಸ್ಯ ಕಿಶೋರ್‌ ದೊಣ್ಣೆಯಿಂದ ಹಲ್ಲೆ ನಡೆಸಿರುವ ಅಮಾನುಷ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಬಾಲಕನನ್ನು ಬೆಂಚಿನ‌ ಮೇಲೆ ಬಾಲಕನನ್ನು‌ ಮಲಗಿಸಿ ದೊಣ್ಣೆಯಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿದ್ದಲ್ಲದೆ ಯಾರಿಗೂ ವಿಚಾರ ತಿಳಿಸದಂತೆ ಬೆದರಿಕೆ ಹಾಕಿದ್ದಾನಂತೆ ಕಿಶೋರ್‌ನ ಈ ದರ್ಪ ಇದೇ ಮೊದಲಲ್ಲವಂತೆ. ಈ ಹಿಂದೆಯೂ ಕೂಡ ಇದೇ ರೀತಿ ಹಲವಾರು ಮಕ್ಕಳಿಗೆ ಹೊಡೆದಿದ್ದನಂತೆ ಈ ಕಿಶೋರ್.‌

ಪ್ರಸ್ತುತ ಏಟು ತಿಂದ ಬಾಲಕ ಅಸ್ವಸ್ಥಗೊಂಡಿದ್ದು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಿಶೋರ್‌ ವರ್ತನೆಗೆ ಪೋಷಕರು ಆಕ್ರೋಶ ಹೊರ ಹಾಕಿದ್ದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.‌

Share Post