BengaluruCrime

ಶಂಕಿತ ಉಗ್ರರಿಗೆ ಗನ್‌ ನೀಡಿದ್ದು ಯಾರು..?, ಕೊಟ್ಟಿದ್ದು ಎಲ್ಲಿ..?; ಜಾಡು ಹಿಡಿದ ಪೊಲೀಸರು..!

ಬೆಂಗಳೂರು;  ಇತ್ತೀಚೆಗೆ ಸಿಸಿಬಿ ಪೊಲೀಸರು ಐವರು ಶಂಕಿತ ನಕ್ಸಲರನ್ನು ಬಂಧಿಸಿ, ಅವರಿಂದ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಅದರಲ್ಲಿ ಗನ್‌ಗಳು ಕೂಡಾ ಸಿಕ್ಕಿದ್ದವು. ಈ ಗನ್‌ಗಳು ಯಾರು ಕೊಟ್ಟರು ಎಂಬುದರ ಜಾಡು ಹಿಡಿದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶಂಕಿತ ಉಗ್ರರಿಗೆ ಗನ್‌ ಸಪ್ಲೈ ಮಾಡಿದಾತನ ಜಾಡು ಹಿಡಿದು ಹೊರಟಿದ್ದಾರೆ.

ತುಮಕೂರು ರಸ್ತೆಯ ಟಿ ಬೇಗೂರು ಬಳಿ ಶಂಕಿತ ಉಗ್ರ ರಬ್ಬಾನಿ ಗನ್‌ ಇದ್ದ ಬ್ಯಾಗ್‌ನ್ನು ಪಡೆದಿದ್ದನಂತೆ. ಜುನೈದ್‌ ಸೂಚನೆಯ ಮೇರೆಗೆ ರಬ್ಬಾನಿ ಈ ಸ್ಥಳಕ್ಕೆ ಹೋಗಿ ಗನ್‌ ಇದ್ದ ಬ್ಯಾಗ್‌ ಪಡೆದಿದ್ದ ಎನ್ನಲಾಗಿದೆ. ಜೈಲಿನಲ್ಲಿ ಪರಿಚಯವಾಗಿದ್ದ ಪೋಕ್ಸೋ ಪ್ರಕರಣವೊಂದರ ಆರೋಪಿ ಈ ಬ್ಯಾಗ್‌ ಇರುತ್ತಾನೆ ಎಂದು ರಬ್ಬಾನಿಗೆ ಜುನೈದ್‌ ಹೇಳಿದ್ದ ಎಂದು ಹೇಳಲಾಗುತ್ತಿದೆ. ಟಿ ಬೇಗೂರಿನಲ್ಲಿ ಬ್ಯಾಗ್‌ ಪಡೆದಿದ್ದ ರಬ್ಬಾನಿ, ತಬ್ರೇಜ್‌ಗೆ ಬ್ಯಾಗ್‌ ತಂದುಕೊಟ್ಟಿದ್ದ ಎಂದು ತಿಳಿದುಬಂದಿದೆ.

ಬ್ಯಾಗ್‌ ತಂದುಕೊಟ್ಟವನು ಆರ್‌ಟಿ ನಗರ ಅಥವಾ ಹೆಬ್ಬಾಳ ಕಡೆಯವನು ಎಂದು ಹೇಳಲಾಗುತ್ತಿದೆ. ಆಸ್ಪತ್ರೆಯೊಂದರ ಸಿಸಿಟಿವಿಯಲ್ಲಿ ಗನ್‌ ತಂದುಕೊಟ್ಟ ಚಹರೆ ಪತ್ತೆಯಾಗಿದೆ. ಹೆಬ್ಬಾಳದ ಆಸ್ಪತ್ರೆಯಲ್ಲಿ ಆತನ ಚಹರೆ ಪತ್ತೆಯಾಗಿದ್ದು, ಅದರ ಆಧಾರದ ಮೇಲೆ ಆರೋಪಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

 

Share Post