ವರಸೆಯಲ್ಲಿ ಮಗನ ಜೊತೆ ಸಂಬಂಧ; ವಿಷ ಕುಡಿಸಿ ಗಂಡನ ಕೊಲೆ!
ಚಿಕ್ಕಮಗಳೂರು; ವರಸೆಯಲ್ಲಿ ಮಗನಾಗಬೇಕಿರುವ ಯುವಕನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ಗಂಡನಿಗೆ ವಿಷ ಕುಡಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ.. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೊಡ್ಡಿಬೀರನಹಳ್ಳಿಯ 48 ವರ್ಷದ ಜಯಣ್ಣ ಎಂಬಾತನೆ ಕೊಲೆಯಾದ ವ್ಯಕ್ತಿಯಾಗಿದ್ದಾರೆ..
ಪೊಲೀಸರು ಮೃತನ ಪತ್ನಿ ಶೃತಿ (35) ಹಾಗೂ ಆಕೆಯ ಪ್ರಿಯಕರ ಕಿರಣ್ ನನ್ನು ಬಂಧಿಸಿದ್ದಾರೆ.. ವಿಷ ಕುಸಿದ್ದರಿಂದ ಜಯಣ್ಣ ತೀವ್ರ ಅಸ್ವಸ್ಥನಾಗಿದ್ದ ಜಯಣ್ಣರನ್ನು ಆಸ್ಪತ್ರೆಗೆ ಸೇರಿಸುತ್ತೇನೆ ಎಂದು ಕಾರಿನಲ್ಲಿ ಕರೆದುಕೊಂಡು ಹೋದ ಆರೋಪಿ ಮಹಿಳೆ ಸಾಯುವವರೆಗೂ ಕಾರಿನಲ್ಲೇ ಸುತ್ತಾಡಿಸಿದ್ದಾಳೆ.. ಸತ್ತ ಮೇಲೇ ಅನಾರೋಗ್ಯದಿಂದ ಸತ್ತಿದ್ದಾನೆ ಎಂದು ಕತೆ ಕಟ್ಟಿದ್ದಳು.. ಆರೋಪಿಯ ಮಗಳನ್ನು ವಿಚಾರಿಸಿದಾಗ ನಿಜ ವಿಷಯ ಬಯಲಾಗಿದೆ.