ನಾಗೇಶ್ ಮನೆಗೆ ಮುತ್ತಿಗೆ ಪ್ರಕರಣ; 28 ಎನ್‌ಎಸ್‌ಯುಐ ಕಾರ್ಯಕರ್ತರಿಗೆ ಜಾಮೀನು
ತುಮಕೂರು; ತಿಪಟೂರಿನ ಶಿಕ್ಷಣ ಸಚಿವ ನಾಗೇಶ್ ಅವರ ಮನೆಗೆ ಮುತ್ತಿಗೆ ಹಾಕಿದ ಕಾರಣಕ್ಕಾಗಿ ಬಂಧಿತರಾಗಿದ್ದ ಎನ್‌ಎಸ್‌ಯುಐನ 28 ಮಂದಿಗೆ ಇಂದು ಜಾಮೀನು ಸಿಕ್ಕಿದೆ. ತಿಪಟೂರು ಕೋರ್ಟ್ ಬಂಧಿತರೆಲ್ಲರೂ ಜಾಮೀನು ಮಂಜೂರು ಮಾಡಿದೆ.
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ತಿಪಟೂರಿನ ಎನ್‌ಎಸ್‌ಯುಐ ಕಾರ್ಯಕರ್ತರು ಸಚಿವ ನಾಗೇಶ್ ಅವರ ನಿವಾಸದಕ್ಕೆ ಜೂನ್ ೧ ರಂದು ಮುತ್ತಿಗೆ ಹಾಕಿದ್ದರು. ಈ ವೇಳೆ ಆರ್‌ಎಸ್‌ಎಸ್ ಚೆಡ್ಡಿ ಸುಡಲಾಗಿತ್ತು. ಈ ಸಂಬಂಧ ಕೇಸ್ ದಾಖಲಸಿಕೊಂಡಿದ್ದ ಪೊಲೀಸರು, 28 ಮಂದಿಯನ್ನು ಬಂಧಿಸಿದ್ದರು.