ಬೆಳಗಾವಿಯಲ್ಲಿ ಕಲುಷಿತ ನೀರು ಕುಡಿದು 50 ಮಂದಿ ಅಸ್ವಸ್ಥ
ಬೆಳಗಾವಿ; ಬೆಳಗಾವಿ ಜಿಲ್ಲೆ ರಾಮದುರ್ಗ ಬಳಿಯ ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಮನೆಗಳಿಗೆ ನೀರು ಪೂರೈಸುವ ಪೈಪ್ ಒಡೆದಿದ್ದು, ಅದಕ್ಕೆ ಚರಂಡಿ ನೀರು ಸೇರಿದೆ. ಅದನ್ನು ತಿಳಿಯದೇ ಕುಡಿದ ಜನರು ಅನಾರೋಗ್ಯದಿಂದಾಗಿ ಅಸ್ವಸ್ಥರಾಗಿದ್ದಾರೆ.
ಅಸ್ವಸ್ಥರನ್ನು ರಾಮದುರ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಕೆಲವರನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವ ಪೈಪ್ ಒಡೆದಿದ್ದು, ಅಲ್ಲಿಯೇ ಹರಿಯುತ್ತಿದ್ದ ಚರಂಡಿ ನೀರು ಅದರಲ್ಲಿ ಸೇರಿತ್ತು. ಆದರೂ ಕೂಡಾ ಗ್ರಾಮ ಪಂಚಾಯತ್ ನವರು ತಲೆ ಕೆಡಿಸಿಕೊಂಡಿಲ್ಲ.. ಇತ್ತ ತಿಳಿಯದೇ ಜನರೂ ಅದೇ ನೀರನ್ನು ಸೇವಿಸಿದ್ದಾರೆ. ಇದ್ರಿಂದ ಜನರಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಸ್ಥಳಕ್ಕೆ ತಹಸೀಲ್ದಾರ್ ನೇತೃತ್ವದ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದೆ.