Bengaluru

400 ಸಿವಿಲ್ ಇಂಜಿನಿಯರ್ ಗಳ ನೇಮಕಕ್ಕೆ ನೀರಾವರಿ ಇಲಾಖೆ ಅನುಮತಿ

ಬೆಂಗಳೂರು; ನೀರಾವರಿ ಇಲಾಖೆಯಲ್ಲಿ,100 ಜನ ಅಸಿಸ್ಟೆಂಟ್ ಇಂಜಿನಿಯರ್,300 ಜನ ಜ್ಯೂನಿಯರ್ ಇಂಜಿನಿಯರ್ ಸೇರಿ ಒಟ್ಟು 400 ಜನರ ನೇಮಕಕ್ಕೆ ಸಚಿವ ಗೋವಿಂದ ಕಾರಜೋಳ ಅನಿಮತಿ ನಿಡಿದ್ದಾರೆ. ಇಲಾಖೆಯಲ್ಲಿ ಹಲವು ವರ್ಷಗಳಿಂದ ಅಸಿಸ್ಟೆಂಟ್ ಇಂಜಿನಿಯರ್, ಜ್ಯೂನಿಯರ್ ಇಂಜಿನಿಯರ್ ಗಳ ನೇಮಕಾತಿ ನಡೆದಿರಲಿಲ್ಲ.ಹಾಗಾಗಿ ಕಾಮಗಾರಿ ವಿಳಂಭವಾಗುತಿತ್ತು.

ಒಟ್ಟು ಸಾವಿರ ಜನರನ್ನ ಹುದ್ದೆಗೆ ನೇಮಕಾತಿ ಆಗಬೇಕಿತ್ತು ಬದಲಿಗೆ 400 ಜನರ ನೇಮಕಕ್ಕೆ ಮಾತ್ರ ಅನುಮತಿ ನೀಡಿಲಾಗಿದೆ.ಸಚಿವರು ಮುಖ್ಯಮಂತ್ರಿ ಹಾಗೂ ಹಣಕಾಸು ಇಲಾಖೆ ಜೊತೆ ಮಾತನಾಡಿ 300 ಜನ ಅಸಿಸ್ಟೆಂಟ್ ಇಂಜಿನಿಯರ್ ಹಾಗು ನೂರು ಜನ ಜ್ಯೂನಿಯರ್ ಇಂಜಿನಿಯರ್ ನೇಮಕಾತಿಗೆ ಒಪ್ಪಿಗೆ ಸೂಚಿಸಲಾಗಿದೆ. ಸಿವಿಲ್ ಇಂಜಿನಿಯರ್ ಗಳನ್ನ ಕಾಂಟ್ರಾಕ್ಟ್ ಆದಾರದ ಮೇಲೆ ನೇಮಕ ಮಾಡಿಕೊಳಲಾಗುವುದು.ಹಣಕಾಸು ಇಲಾಖೆ ಒಪ್ಪಿಗೆ ಪಡೆದು ಅಧಿಸೂಚನೆ ಮಾಡಲಾಗುವುದು.ಮೆರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ ನೇಮಕ ಮಾಡಲಾಗುವುದು.

Share Post