ಜಿಲ್ಲಾಸ್ಪತ್ರೆಯಲ್ಲಿ ಏಳು ವೈದ್ಯರ ಬ್ಯಾಗ್‌ಗಳು ಕಳವು
ಮಡಿಕೇರಿ; ಮಡಿಕೇರಿ ಜಿಲ್ಲಾಸ್ಪತ್ರೆ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತೆ. ಮೊನ್ನೆಯಷ್ಟೇ ಶವಾಗಾರದಲ್ಲಿ ನೌಕರನೊಬ್ಬ ಮಹಿಳೆಯರ ಜೊತೆ ಚಕ್ಕಂದ ಆಡಿದ್ದ. ಇದೀಗ ಕಳ್ಳನೊಬ್ಬ ಆಸ್ಪತ್ರೆಯಲ್ಲಿ ಕೈಚಳಕ ತೋರಿಸಿದ್ದಾನೆ. ಏಳು ವೈದ್ಯರ ಬ್ಯಾಗ್‌ಗಳನ್ನು ಕಳವು ಮಾಡಿದ್ದು, ಆ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಕಳೆದ ರಾತ್ರಿ ಕಳ್ಳನೊಬ್ಬ ಆಸ್ಪತ್ರೆಯಲ್ಲಿ ವೈದ್ಯರು ಇಟ್ಟಿದ್ದ ಬ್ಯಾಗ್‌ಗಳನ್ನು ಎತ್ತಿಕೊಂಡು ಹೋಗಿದ್ದಾನೆ. ಅದಕ್ಕೂ ಮೊದಲು ಒಂದು ಗಂಟೆ ಕಾಲ ಆಸ್ಪತ್ರೆ ಸುತ್ತ ಓಡಾಡಿದ್ದಾನೆ. ನಂತರ ಬ್ಯಾಗುಗಳಲ್ಲಿದ್ದ ವೈದ್ಯರ ಎಟಿಎಂ ಕಾರ್ಡ್‌ಗಳನ್ನು ತೆಗೆದುಕೊಂಡು ಬೈಕನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾನೆ.