ಉದ್ಯಮಿಗಳಿಗೆ ಮುಂಜಾನೆಯೇ ಐಟಿ ಶಾಕ್; 30 ಕಡೆ ದಾಳಿ
ಬೆಂಗಳೂರು; ಆದಾಯ ತೆರಿಗೆ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಬೆಂಗಳೂರಿನ ಉದ್ಯಮಿಗಳಿಗೆ ಶಾಕ್ ನೀಡಿದ್ದಾರೆ. 30 ತಂಡಗಳಲ್ಲಿ ಐಟಿ ಅಧಿಕಾರಿಗಳು ಸುಮಾರು 30 ಕಡೆ ದಾಳಿ ನಡೆಸಿದ್ದಾರೆ.
ವಿಜಯನಗರ, ಬಿಟಿಎಂ ಲೇಔಟ್, ಸದಾಶಿವನಗರ, ಹುಳಿಮಾವು ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಮೆಡಿಕಲ್ ಶಾಪ್‌ಗಳು, ಆಸ್ಪತ್ರೆಗಳು, ಚಿನ್ನದ ಅಂಗಡಿಗಳು ಹಾಗೂ ಹಲವು ಸಂಸ್ಥೆಗಳ ಮೇಲೆ ದಾಳಿ ಮಾಡಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
30 ತಂಡಗಳಲ್ಲಿ ಅಧಿಕಾರಿಗಳು ದಾಳಿ ನಡೆಸಲಾಗಿದ್ದು, 5 ರಿಂದ 6 ಅಧಿಕಾರಿಗಳು ಒಂದೊಂದು ತಂಡದಲ್ಲಿದ್ದಾರೆ. ಎಲ್ಲಾ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಐಟಿ ಇಲಾಖೆಗೆ ತಪ್ಪು ಮಾಹಿತಿ ನೀಡಿದ ಮಾಹಿತಿ ನೀಡಿದ ಅನುಮಾನದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.