Districts

ಕ್ಯಾಮೇನಹಳ್ಳಿ ಶೀ ಆಂಜನೇಯ ಸ್ವಾಮಿ ದೇಗುಲಕ್ಕೆ ಬೀಗ

ತುಮಕೂರು: ಮುಜರಾಯಿ ಇಲಾಖೆ ಹಾಗೂ ಅರ್ಚಕರ ನಡುವೆ ಸಮನ್ವಯದ ಕೊರತೆಯಿಂದಾಗಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಲ್ಪತರ ನಾಡಿನ ಸುಪ್ರಸಿದ್ಧ ಪುಣ್ಯಕ್ಷೇತ್ರ ಕೊರಟಗೆರೆ ತಾಲ್ಲೂಕಿನ ಕ್ಯಾಮೇನಹಳ್ಳಿ ಶೀ ಆಂಜನೇಯ ಸ್ವಾಮಿ ದೇಗುಲಕ್ಕೆ ಬೀಗ ಬಿದ್ದಿದೆ.

ಮುಜರಾಯಿ ಇಲಾಖೆ ವ್ಯವಸ್ಥಾಪಕ ಸಮಿತಿ ಮತ್ತು ಇಬ್ಬರು ಅರ್ಚಕರ ನಡುವೆ ಸಮನ್ವಯ ಕೊರತೆ ಹಾಗೂ ಸಂಘರ್ಷ ದಿಂದ ನಿನ್ನೆ ನಡೆಯಬೇಕಿದ್ದ ಬ್ರಹ್ಮರಥೋತ್ಸವಕ್ಕೂ ಅಡ್ಡಿ ಉಂಟಾಯಿತು. ದೇಗುಲಕ್ಕೆ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅರ್ಚಕರಾದ ರಾಮಾಚಾರಿ ಮತ್ತು ಡಿ ಕೆ ಲಕ್ಷ್ಮಿ ನಾರಾಯಣ ಭಟ್ಟರ ಮಧ್ಯೆ ಪ್ರಧಾನ ಅರ್ಚಕರ ಹುದ್ದೆ ವಿವಾದ ತಾರಕಕ್ಕೇರಿದ್ದೇ ಇದಕ್ಕೆ ಕಾರಣ.

ಪ್ರತಿದಿನ ಮುಂಜಾನೆಯಿಂದ ದೇಗುಲದಲ್ಲಿ ಪೂಜಾ ಕಾರ್ಯಗಳು ನಡೆಯುತ್ತಿದ್ದವು. ಆದರೆ ಇಬ್ಬರು ಅರ್ಚಕರ ನಡುವಿನ ಸಮನ್ವಯ ಕೊರತೆ ಹಾಗೂ ಸಂಘರ್ಷದಿಂದ ತಾವು ಪೂಜೆ ಸಲ್ಲಿಸದೇ ಬೇರೆಯವರಿಗೂ ಪೂಜೆ ಸಲ್ಲಿಸಲು ಅವಕಾಶ ನೀಡದೆ ಅರ್ಚಕರು ಬೀಗ ಹಾಕಿರುವುದರಿಂದ ಭಕ್ತರಲ್ಲಿ ನಿರಾಸೆ ಮೂಡಿದೆ.

ಇನ್ನು ಜಿಲ್ಲಾಧಿಕಾರಿಯ ಆದೇಶದಂತೆ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲದ ಅರ್ಚಕರಾದ ಡಿಕೆ ಲಕ್ಷ್ಮೀನಾರಾಯಣ ಭಟ್ಟರನ್ನು ಕ್ಯಾಮೇನಹಳ್ಳಿ ಶ್ರೀ ಆಂಜನೇಯಸ್ವಾಮಿ ದೇಗುಲಕ್ಕೆ ನಿಯೋಜನೆ ಮಾಡಲಾಗಿದೆ.

 

Share Post