ಲತಾ ಮಂಗೇಶ್ಕರ್ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ
ಬೆಂಗಳೂರು: ಲತಾ ಮಂಗೇಶ್ಕರ್ ನಿಧನಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಸಂತಾಪ ಸೂಚಿಸಿದ್ರು. ಭಾರತ ದೇಶದ ಸಾರಸ್ವತ ಲೋಕದಲ್ಲಿ ಮಿನುಗುವ ತಾರೆ. ಕಾಲತೀತವಾಗಿ ಗಾನ ಸ್ವರವನ್ನು ಶ್ರೀಮಂತಗೊಳಿಸಿದವರು. ಅವರು ಹಾಡು ಕೇವಲ ಸಿನಿಮಾಗೆ ಸೀಮಿತವಾಗಿರಲಿಲ್ಲ ಭಜನೆ, ದೈವ ಭಕ್ತಿ, ಅವರ ದೇಶಭಕ್ತಿ ಹಾಡು ʻಯೇ ಮೇರ ವತನ್ ಕೆ ಲೋಗೊʼ ಹಾಡು ಹಿಮಾಲಯದಷ್ಟೇ ಚಿರಸ್ಥಾಯಿಯಾಗಿ ಉಳಿದಿದೆ. ಆ ಹಾಡು ಇವತ್ತಿಗೂ ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತಿದೆ. ದೇಶ ಭಕ್ತಿ ಉಕ್ಕಿ ಹರಿಯುತ್ತದೆ. ಎಲ್ಲಿವರೆಗೂ ಭೂಮಿ ಮೇಲೆ ಸಂಗೀತ ಇರುತ್ತದೊ, ಹಾಡುಗಾರಿಕೆ ಇರುತ್ತದೆ ಅಲ್ಲಿವರೆಗೂ ಅವರ ಹೆಸರು ಚಿರಸ್ಥಾಯಿಯಾಗಿರುತ್ತದೆ. ಅವರ ಕನ್ನಡ ಹಾಡು ಕೂಡ ಅಷ್ಟೇ ಪ್ರಸಿದ್ದಿಯಾಗಿದೆ. ಅವರ ಅಗಲಿಕೆ ನಮ್ಮೆಲ್ಲರಿಗೂ ಅಪಾರ ದುಃಖವನ್ನು ತಂದೊಡ್ಡಿದೆ. ನಮ್ಮ ಭಾರತದ ಕೋಗಿಲೆ ಇಂದು ಹಾಡನ್ನು ನಿಲ್ಲಿಸಿದ್ದಾರೆ ಇದು ಎಲ್ಲರಿಗೂ ದುಃಖದ ಸಂಗತಿ. ಅವರ ಹಾಡನ್ನು ಕೇಳಿ ಬೆಳೆದವರು ನಾವು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ, ತಾರೆ ಹಾಗೆ ಸದಾ ಕಾಲ ಮಿನುಗುತ್ತಿರಲಿ. ಭಾರತದಲ್ಲಿ ಅವರ ಹಾಡು ಎಲ್ಲಾ ಕಡೆ ಭಜಿಸುತ್ತಿದೆ ಲತಾ ಮಂಗೇಶ್ಕರ್ ನಮ್ಮ ನೆನಪಿನ ಅಂಗಳದಲ್ಲಿ ಸದಾ ಇರುತ್ತಾರೆ ಎಂದು ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.