Districts

ಕಲ್ಲುಗಾಣಿರಿಕೆ ತಡೆದು ಗ್ರಾಮಸ್ಥರ ಪ್ರತಿಭಟನೆ

ತುರುವೇಕೆರೆ: ಕೋಳಘಟ್ಟ ಬಳಿ ಕಲ್ಲುಗಣಿಗಾರಿಕೆ ನಡೆಸುವುದರಿಂದ ಸುತ್ತಮುತ್ತ ಜನ , ಜಾನುವಾರುಗಳಿಗೆ ತೊಂದರೆಯಾಲಿದೆ ಎಂದು ಗ್ರಾಮಸ್ಥರು ಕಲ್ಲುಗಣಿಗಾರಿಕೆ ನಡೆಸಲು ಬಂದಿದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡು ಪ್ರತಿಭಟನೆ ನಡೆಸಿದರು.
ತಾಲೂಕಿನ ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳಘಟ್ಟದ ಗ್ರಾಮದ ಗೋಮಾಳ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ನಡೆಸಿ, ಅಲ್ಲಿನ ಕಲ್ಲನ್ನು ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಗೆ ಬಳಸಲು ಡಿಸಿಗೆ ಅನುಮತಿ ನೀಡಿದ್ದಾರೆ.
ಕೋಳಘಟ್ಟ, ಅಜ್ಜೇನಹಳ್ಳಿ , ನೀರಗುಂದ ನೆಮ್ಮದಿ ಗ್ರಾಮ ಸೇರಿದಂತೆ ಸುತ್ತಮುತ್ತ ಗ್ರಾಮಗಳ ಜನತೆ ಕಲ್ಲುಗಣಿಗಾರಿಕೆ ವಿರೋಧಿಸಿದ್ದರು.
ಕಲ್ಲು ಬಂಡೆ ಒಡೆಯಲು ಸ್ಫೋಟಕಗಳನ್ನು ಬಳಸುವುದರಿಂದ ಸುತ್ತಮುತ್ತ ಜನರ ಮೇಲೆ ತೊಂದರೆಯಾಲಿದೆ. ಸ್ಫೋಟದ ತೀವ್ರತೆ ಹೆಚ್ಚಿದ್ದು, ಹೀಗಾಗಿ ಕಲ್ಲುಗಣಿಗಾರಿಕೆ ನಡೆಸುವುದು ಸೂಕ್ತವಲ್ಲ. ಈ ಬಗ್ಗೆ ಶಾಸಕ ಮಸಾಲಜಯರಾಂ ಬರುವ ತನಕ ಯಾವುದಕ್ಕೂ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದರು.

 

Share Post