BengaluruCinemaCrime

ಯುವ ರಾಜ್‌ಕುಮಾರ್‌ ಪತ್ನಿ ವಿರುದ್ಧ ಕೋರ್ಟ್‌ ಮೊರೆ ಹೋದ ಸಪ್ತಮಿ ಗೌಡ!

ಬೆಂಗಳೂರು; ಕಾಂತಾರಾ ಬಡಗಿ ಸಪ್ತಮಿಗೌಡ ಅವರು ನಟ ಯುವರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದಾರೆ.. ಯುವ ರಾಜ್‌ಕುಮಾರ್‌ ಅವರು ತಮ್ಮ ಪತ್ನಿಗೆ ಡಿವೋರ್ಸ್‌ ನೋಟಿಸ್‌ ಕಳುಹಿಸಿದ್ದರು.. ಇದಕ್ಕೆ ಶ್ರೀದೇವಿ ಅವರು ಉತ್ತರ ನೀಡಿದ್ದು, ಅದರಲ್ಲಿ ನನ್ನ ಗಂಡನಿಗೆ ಸಹನಟಿ ಜೊತೆ ಸಂಬಂಧ ಇದ್ದು, ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು ಎಂದು ಹೇಳಿಕೊಂಡಿದ್ದರು.. ಈ ಹಿನ್ನೆಲೆಯಲ್ಲಿ ಸಪ್ತಮಿ ಗೌಡ ಅವರು, ಇಲ್ಲಸಲ್ಲದ ಆರೋಪ ಹೊರಿಸಿ ನನ್ನ ಚಾರಿತ್ರ್ಯವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ..

ನನ್ನ ಬಗ್ಗೆ ಮಾನಹಾನಿ ಹೇಳಿಕೆ ನೀಡದಂತೆ ಶ್ರೀದೇವಿ ಅವರಿಗೆ ನಿರ್ಬಂಧ ಹೇರಬೇಕು ಎಂದು ಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ.. ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ನಟಿ ಸಪ್ತಮಿಗೌಡ ಈ ಅರ್ಜಿ ಸಲ್ಲಿಸಿದ್ದಾರೆ.. ಸಪ್ತಮಿಗೌಡ ಪರ ವಕೀಲ ಕಿರಣ್‌ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ..

Share Post