CrimeNational

ಪುಣೆ ಬಳಿ ತರಬೇತಿ ವಿಮಾನ ಪತನ; ಘಟನೆಗೆ ಕಾರಣ ಏನು ಗೊತ್ತಾ..?

ಪುಣೆ; ಮಹಾರಾಷ್ಟ್ರದ ಪುಣೆ ಬಳಿ ತರಬೇತಿ ವಿಮಾನ ಪತನವಾಗಿದ್ದು, ಮಹಿಳಾ ಪೈಲಟ್‌ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
   ತರಬೇತಿ ಸಲುವಾಗಿ ಹಾರಾಟ ನಡೆಸುವಾಗ  ಇಂದಾಪುರ ತಾಲ್ಲೂಕಿನ ಕಡ್ಬನವಾಡಿ ಗ್ರಾಮದ ಹೊದಲ್ಲಿ ವಿಮಾನ ಉರುಳಿಬಿದ್ದಿದೆ. ಇದ್ರಿಂದಾಗಿ ವಿಮಾನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಸಣ್ಣ ಪ್ರಮಾನದ ತರಬೇತಿ ವಿಮಾನ ಇದಾಗಿದ್ದು, ವಿಮಾನವು ಕವರ್ ಏವಿಯೇಷನ್ ​​ಕಂಪನಿಗೆ ಸೇರಿದ್ದಾಗಿದೆ.
   ವಿಮಾನ ಪೈಲಟ್‌ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ವಿಮಾನ ನೆಲಕ್ಕುಳುತ್ತಿದ್ದಂತೆ ಸ್ಥಳಕ್ಕೆ ಬಂದ ಸ್ಥಳೀಯರು, ಮಹಿಳಾ ಪೈಲಟ್‌ನ್ನು ರಕ್ಷಣೆ ಮಾಡಿದ್ದಾರೆ.
Share Post