ಪ್ರಿಯಕರನ ಜೊತೆ ಪತ್ನಿಯ ಸರಸ; ವಿಡಿಯೋ ವೈರಲ್
ಮುಂಬೈ; ಪ್ರಿಯಕರನೊಂದಿಗೆ ಸರಸವಾಡುವ ಪತ್ನಿಯ ವಿಡಿಯೋ ಒಂದನ್ನು ಮಾಜಿ ಪತಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.. ಮಹಾರಾಷ್ಟ್ರದ ಥಾಣೆಯ ದೋಂಬಿವಲಿಯಲ್ಲಿ ನಡೆದಿದೆ.
ಪತ್ನಿ ಬೇರೊಬ್ಬನ ಜೊತೆ ಸಂಬಂಧ ಹೊಂದಿದ್ದಾಳೆಂದು ಗಂಡ ಅನುಮಾನ ಪಡುತ್ತಿದ್ದ.. ಇದೇ ಕಾರಣಕ್ಕೆ ಡೈವೋರ್ಸ್ ನೀಡಿದ್ದ.. ನಂತರ ಮಾಜಿ ಪತ್ನಿಗೆ ಗೊತ್ತಿಲ್ಲದಂತೆ ಆಕೆಯ ಮನೆಯ ಬೆಡ್ರೂಮ್ ನಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿದ್ದ. ಮಾಜಿ ಪತ್ನಿ ಬೇರೊಬ್ಬನ ಜೊತೆ ಇರುವ ಖಾಸಗಿ ವಿಡಿಯೋ ಚಿತ್ರೀಕರಿಸಿದ್ದ.. ಅದನ್ನು ವೈರಲ್ ಮಾಡಿದ್ದಾನೆ..
ಮಾಜಿ ಗಂಡನ ಈ ವಿಕೃತಿಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಸಂತ್ರಸ್ತ ಮಹಿಳೆ ಈ ಬಗ್ಗೆ ದೂರು ನೀಡಿದ್ದಾಳೆ. ಪೊಲೀಸರು ತನಿಖೆ ಶುರು ಮಾಡಿದ್ದಾರೆ.