BengaluruCrimePolitics

ಮುಡಾ ಕೇಸ್‌; ಸೆಪ್ಟೆಂಬರ್‌ 12ಕ್ಕೆ ಸಿಎಂ ಸಿದ್ದರಾಮಯ್ಯ ಭವಿಷ್ಯ?

ಬೆಂಗಳೂರು; ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್‌ ವಿರುದ್ಧ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್‌ ಅರ್ಜಿಯ ವಿಚಾರಣೆ ಇವತ್ತೂ ಕೂಡಾ ನಡೆಯಿತು.. ಎರಡೂ ಕಡೆಯ ವಕೀಲರು ಇಂದು ತಮ್ಮ ವಾದ ಮಂಡಿಸಿದರು.. ಎರಡೂ ಕಡೆಯ ವಾದ ಆಲಿಸಿದ ನ್ಯಾಯಮೂರ್ತಿಗಳು, ವಿಚಾರಣೆಯನ್ನು ಸೆಪ್ಟೆಂಬರ್‌ 12ಕ್ಕೆ ಮುಂದೂಡಿದ್ದಾರೆ.. ಅಂದು ಸಿಎಂ ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ತಮ್ಮ ವಾದ ಮಂಡನೆ ಮಾಡಲಿದ್ದಾರೆ.. ಇದು ಬಹುತೇಕ ಕೊನೇ ಹಂತದ ವಾದವಾಗಿದ್ದು, ಇದಾದ ಮೇಲೆ ನ್ಯಾಯಾಧೀಶರು ಆದೇಶ ಹೊರಡಿಸುವ ಸಾಧ್ಯತೆ ಇದೆ.. ಹೀಗಾಗಿ ಸೆಪ್ಟೆಂಬರ್‌ 12ರಂದು ನಡೆಯುವ ವಿಚಾರಣೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಪಾಲಿಗೆ ಅತ್ಯಂತ ಮಹತ್ವದ್ದು..
ಸರ್ಕಾರದ ಪರವಾಗಿ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ, ರವಿ ವರ್ಮಕುಮಾರ್ ವಾದ ಮಂಡನೆ ಮಾಡಿದರು.. ಸ್ನೇಹಮಯಿ ಕೃಷ್ಣ ಪರ ವಕೀಲರಾದ ಲಕ್ಷ್ಮಿ ಅಯ್ಯಂಗಾರ್ ವಾದ ಮಂಡಿಸಿದರು.. ಸಿದ್ದರಾಮಯ್ಯ ಅವರು 1996–1999ರಲ್ಲಿ ಡಿಸಿಎಂ ಆಗಿದ್ದರು. ಈ ವೇಳೆಯಲ್ಲೇ ಡಿನೋಟಿಫಿಕೇಷನ್‌ ಮಾಡಲಾಗಿದೆ.. 2004-2007ರಲ್ಲಿ ಭೂಪರಿವರ್ತನೆ ಮಾಡಿದ್ದು, 2013– 2018ವರೆಗೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಪರಿಹಾರದ ಸೈಟ್ ಗಳಿಗೆ ಅರ್ಜಿ ಸಲ್ಲಿಸಲಾಗಿತ್ತು ಎಂದು ಲಕ್ಷ್ಮೀ ಅಯ್ಯಂಗಾರ್‌ ವಾದಿಸಿದರು.
ಸಿಎಂ ಪರವಾಗಿ ವಾದಿಸಿದ ಅಡ್ವೊಕೇಟ್‌ ಜನರಲ್‌ ಶಶಿಕಿರಣ್ ಶೆಟ್ಟಿ, ಸುಪ್ರೀಂಕೋರ್ಟ್‌ ಯಾವ ಕೇಸ್‌ನಲ್ಲಿ ಪ್ರಾಥಮಿಕ ತನಿಖೆ ಆಗಬೇಕು ಎಂದು ಹೇಳಿದೆ.. ಮುಡಾ ಕೇಸ್‌ 22 ವರ್ಷಕ್ಕಿಂತ ಹಳೆಯದಾದ್ದರಿಂದ ಪ್ರಾಥಮಿಕ ತನಿಖೆ ಬೇಕು.17ಎ ಅಡಿಯಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿ ರೂಪಿಸಿದೆ ಎಂದು ವಾದ ಮಂಡಿಸಿದರು.

Share Post