National

ಅಪ್ಪಿಕೊಳ್ಳುವುದು, ಬಿರಿಯಾನಿ ತಿನ್ನುವುದರಿಂದ ಸಂಬಂಧಗಳು ಉತ್ತಮವಾಗಲ್ಲ; ಮನಮೋಹನ್‌ ಸಿಂಗ್‌

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಕೇಂದ್ರ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಅವರು, ಕೇಂದ್ರ ಬಿಜೆಪಿ ಸರ್ಕಾರ ವಿದೇಶಾಂಗ ನೀತಿಯಲ್ಲಿ ವಿಫಲವಾಗಿದೆ. ವಿಶ್ವ ನಾಯಕರನ್ನು ಅಪ್ಪಿಕೊಳ್ಳುವುದು, ಮಾತನಾಡಿಸುವುದು ಮತ್ತು ಆಹ್ವಾನಿಸದಿದ್ದರೂ ಬಿರಿಯಾನಿ ತಿನ್ನಲು ಹೋಗುವುದರಿಂದ ವಿದೇಶಿ ಸಂಬಂಧಗಳು ಉತ್ತಮವಾಗುವುದಿಲ್ಲ ಎಂದು ಮನಮೋಹನ್‌ ಸಿಂಗ್‌ ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

ಕೇಂದ್ರ ಬಿಜೆಪಿ ಸರ್ಕಾರಕ್ಕೆ ಆರ್ಥಿಕ ನೀತಿಯ ಬಗ್ಗೆ ತಿಳುವಳಿಕೆಯೇ ಇಲ್ಲ. ಸಮಸ್ಯೆ ರಾಷ್ಟ್ರಕ್ಕೆ ಸೀಮಿತವಾಗಿಲ್ಲ. ವಿದೇಶಾಂಗ ನೀತಿಯಲ್ಲೂ ಈ ಸರ್ಕಾರ ವಿಫಲವಾಗಿದೆ. ಚೀನಾ ನಮ್ಮ ಗಡಿಯಲ್ಲಿ ಕುಳಿತಿದೆ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆ ವಿಚಾರದಲ್ಲಿ ಪಂಜಾಬ್‌ ಮುಖ್ಯಮಂತ್ರಿ ಹಾಗೂ ಪಂಜಾಬ್‌ ರಾಜ್ಯದ ಜನರನ್ನು ಅವಮಾನಿಸಲು ಪ್ರಯತ್ನಿಸಲಾಯಿತು ಎಂದು ಇದೇ ವೇಳೆ ಮನಮೋಹನ್‌ ಸಿಂಗ್‌ ಬಿಜೆಪಿ ಪಕ್ಷವನ್ನು ಹರಿಹಾಯ್ದಿದ್ದಾರೆ.

 

Share Post