CrimeNational

ಗುಜರಾತ್‌ ಜಾಕೋಟ್‌ ಬಳಿ ರೈಲಿಗೆ ಆಕಸ್ಮಿಕ ಬೆಂಕಿ; ಧಗಧಗನೆ ಉರಿದ ರೈಲು

ಗುಜರಾತ್‌; ಗುಜರಾತ್‌ನ ದಾಹೋದ್ ನಿಂದ ಆನಂದ್ ಗೆ ತೆರಳುತ್ತಿದ್ದ ಮೆಮು ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎರಡು ಬೋಗಿಗಳು ಸುಟ್ಟು ಕರಕಲಾಗಿವೆ. ಮಹಿಳಾ ಮೀಸಲು ಕೋಚ್‌ ಹಾಗೂ ಎಸಿ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿವೆ. ಈ ಎರಡೂ ಕೋಚ್‌ಗಳಲ್ಲಿದ್ದವರು ಎಚ್ಚೆತ್ತು ಬಹುಬೇಗ ಇಳಿದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

ಜಾಕೋಟ್‌ ರೈಲು ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ಎರಡೂ ಹಿಂಬದಿಯ ಕೋಚ್‌ಗಳಾಗಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ರೈಲು ಗೋಧ್ರಾ ಕಡೆಗೆ ತೆರಳುತ್ತಿತ್ತೆಂದು ತಿಳಿದುಬಂದಿದೆ.

Share Post