ನಕಲಿ ದಾಖಲೆ ಸೃಷ್ಟಿಸಿ ಇಡೀ ಊರೇ ಮಾರಾಟ; ಪಿಡಿಒ, ಬಿಲ್ಕಲೆಕ್ಟರ್ ಅಮಾನತು!
ಚಿಕ್ಕಬಳ್ಳಾಪುರ; ನಕಲಿ ಖಾತೆ ಸೃಷ್ಟಿ ಮಾಡಿ, ಗ್ರಾಮದ ಜಾಗವನ್ನು 55 ನಿವೇಶನಗಳನ್ನಾಗಿ ವಿಂಗಡಿಸಿ ಮಾರಾಟ ಮಾಡಲಾಗಿದ್ದ, ಪಿಡಿಒ ರನ್ನು ಅಮಾನತು ಮಾಡಲಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿ ಗ್ರಾಮ ಪಂಚಾಯತ್ನ ಬಾರ್ಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿಕೊಂಡು ಜನವಸತಿ ಇಲ್ಲದ ಗ್ರಾಮವನ್ನೇ ಸೈಟ್ಗಳನ್ನಾಗಿ ವಿಂಗಡನೆ ಮಾಡಿ ಮಾರಾಟ ಮಾಡಿದ್ದರು. ಇದಕ್ಕಾಗಿ ಅಕ್ರಮವಾಗಿ ಖಾತೆಗಳನ್ನು ಸೃಷ್ಟಿ ಮಾಡಾಗಿತ್ತು. ತನಿಖೆ ನಂತರ ಈ ವಿಚಾರ ಬಯಲಾಗಿದ್ದು, ತಾಲ್ಲೂಕು ಪಂಚಾಯತ್ ಇಒ ಮಂಜುನಾಥ್ ಅವರು 55 ನಿವೇಶನಗಳ ಖಾತೆಗಳನ್ನು ರದ್ದು ಮಾಡಿದ್ದಾರೆ. ಇದರ ಜೊತೆ ಪಿಡಿಒ ವೆಂಕಟೇಶ್ ಅವರನ್ನು ಅಮಾನತು ಮಾಡುವಂತೆ ಕ್ರಮ ಕೈಗೊಂಡಿದ್ದಾರೆ. ಈಗ ಮತ್ತೆ ಅವಲಗುರ್ಕಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಪ್ರಕಾಶ್ ಕೈಡಾ ಅಮಾನತು ಮಾಡಲಾಗಿದೆ. ಪ್ರಕಾಶ್ ಅವರು ತನ್ನ ಪತ್ನಿ ಹೆಸರಿಗೆ ದಾಖಲೆ ಸೃಷ್ಟಿಸಿ ಸೈಟ್ ಮಾರಾಟ ಮಾಡಿದ್ದರು ಎಂದು ತಿಳಿದುಬಂದಿದೆ.
ಗ್ರಾಮ ಪಂಚಾಯ್ತಿಯೊಂದರ ವ್ಯಾಪ್ತಿಗೆ ಬರುವ ಹಳೇ ಗ್ರಾಮವನ್ನೇ ರಕ್ಷಿಸಿ ಭದ್ರಪಡಿಸಬೇಕಾಗಿದ್ದ ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು, ಅಧಿಕಾರಿಗಳು, ಆ ಗ್ರಾಮವೊಂದರಲ್ಲಿ ಜನವಸತಿ ಇಲ್ಲವೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಿವೇಶನಗಳನ್ನಾಗಿ ವಿಂಗಡಿಸಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.