BengaluruCrime

ಕುಡಿದ ಮತ್ತಿನಲ್ಲಿ ವಾಹನಗಳ ಜಖಂ; 30 ವಾಹನಗಳಿಗೆ ಹಾನಿ!

ಬೆಂಗಳೂರು; ಪುಂಡರ ಗುಂಪೊಂದು ಕಳೆದ ರಾತ್ರಿ ಕಂಠಪೂರ್ತಿ ಕುಡಿದು ಪುಂಡಾಟ ಮೆರೆದಿದೆ. ಲಾಂಗ್‌ ಹಾಗೂ ಮಚ್ಚುಗಳಿಂದ ಹಲವಾರು ವಾಹನಗಳನ್ನು ಜಖಂ ಮಾಡಲಾಗಿದೆ. ಲಗ್ಗೆರೆಯ ರಾಜೀವ್‌ ನಗರದಲ್ಲಿ ಈ ಕೃತ್ಯ ಎಸಗಲಾಗಿದೆ.

ನಸುಕಿನಜಾವದಲ್ಲಿ ಈ ಕೃತ್ಯ ಎಸಗಲಾಗಿದೆ. ಮುಖಕ್ಕೆ ಮಾಸ್ಕ್‌ ಧರಿಸಿದ್ದ ಮೂವರು ವ್ಯಕ್ತಿಗಳು ಲಾಂಗ್‌ ಮಚ್ಚುಗಳಿಂದ ವಾಹನಗಳನ್ನು ಜಖಂ ಮಾಡಿದ್ದಾರೆ. 30 ಕ್ಕೂ ಹೆಚ್ಚು ವಾಹನಗಳ ಗಾಜುಗಳನ್ನು ಪುಡಿಗಟ್ಟಿದ್ದಾರೆ.

12 ಕಾರು, 1 ಆಟೋ, 4 ಟೆಂಪೋಗಳ ಗ್ಲಾಸ್‌ ಪುಡಿ ಪುಡಿಯಾಗಿದೆ. ಕೇವಲೇ ಐದೇ ನಿಮಿಷದಲ್ಲಿ ಇಷ್ಟೆಲ್ಲಾ ಅವಾಂತರ ಮಾಡಿದ್ದಾರೆ.

Share Post