BengaluruCrime

ಕಾಲ್‌ ಗರ್ಲ್‌ ಬೇಕಿದ್ದರೆ ಸಂಪರ್ಕಿಸಿ; ಪತ್ನಿ ಫೋಟೋ ಪೋಸ್ಟ್‌ ಮಾಡಿದ ಪತಿ!

ಬೆಂಗಳೂರು; ಗಂಡ-ಹೆಂಡತಿ ನಡುವೆ ಕೆಲವೊಮ್ಮೆ ಮನಸ್ತಾಪಗಳು ನಡೆಯುತ್ತವೆ.. ಸಾಧ್ಯವಾದರೆ ಅದನ್ನು ಪರಿಹರಿಸಿಕೊಂಡು ಒಟ್ಟಿಗೆ ಬಾಳಬೇಕು.. ಇಲ್ಲವೇ ಡಿವೋರ್ಸ್‌ ಕೊಟ್ಟು ಬೇರೆಯಾಗಬೇಕು.. ಆದ್ರೆ ಕೆಲವರು ಸೇಡು ತೀರಿಸಿಕೊಳ್ಳಲು ಏನೇನೋ ಮಾಡಬಾರದ ಕೆಲಸಗಳನ್ನೆಲ್ಲಾ ಮಾಡುತ್ತಾರೆ.. ಇಲ್ಲೊಬ್ಬ ಪತಿರಾಯ ಮಾಡಿರೋದು ಕೂಡಾ ಅದನ್ನೇ.. ಪತ್ನಿಯ ಜೊತೆಗೆ ಜಗಳವಾಡಿ ದೂರರವಾಗಿದ್ದ ಪತಿ, ತನ್ನ ಪತ್ನಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಕಾರ್ಲ್‌ ಗರ್ಲ್‌ ಬೇಕಿದ್ದರೆ ಕರೆ ಮಾಡಿ ಎಂದು ನಂಬರ್‌ ಕೂಡಾ ಹಾಕಿದ್ದಾನೆ..

ಇದನ್ನೂ ಓದಿ; ಡಾ.ಸಿ.ಎನ್‌.ಮಂಜುನಾಥ್‌ ಪರ ಪ್ರಚಾರ ಮಾಡಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ!

ವರ್ಷದಿಂದ ದೂರವಾಗಿರುವ ದಂಪತಿ;

ಬೆಂಗಳೂರಿನ ನಂದಿನಿ ಲೇಔಟ್‌ ನಲ್ಲಿ ಈ ಘಟನೆ ನಡೆದಿದೆ.. ಸತ್ಯನಾರಾಯಣರೆಡ್ಡಿ ಎಂಬಾತನೇ ತನ್ನ ಪತ್ನಿಯ ಫೋಟೋವನ್ನು ಫೇಸ್‌ ಬುಕ್‌ನಲ್ಲಿ ಹಾಕಿ ಕಾಲ್‌ ಗರ್ಲ್‌ ಬೇಕಿದ್ರೆ ಕರೆ ಮಾಡಿ ಎಂದು ಪತ್ನಿಯ ಸಹೋದರನ ನಂಬರ್‌ ಹಾಕಿದ್ದಾನೆ.. ಇವರಿಬ್ಬರೂ 2019ರಲ್ಲಿ ಮದುವೆಯಾಗಿದ್ದರು.. ಆದ್ರೆ ಮದುವೆಯಾದ ಮೇಲೆ ದಾಂಪತ್ಯ ಕಲಹ ದಿನವೂ ನಡೆಯುತ್ತಿತ್ತು.. ಕೊನೆಗೆ ವರ್ಷದ ಹಿಂದೆ ಇಬ್ಬರೂ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದರು.. ಆದ್ರೆ ಅದೇನಾಯ್ತೋ ಏನೋ ಪತಿರಾಯ ತನ್ನ ಪತ್ನಿಯ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿ ಕಾಲ್‌ ಗರ್ಲ್‌ ಬೇಕಿದ್ದರೆ ಕರೆ ಮಾಡಿ ಎಂದು ಆಕೆಯ ಸಹೋದರನ ನಂಬರ್‌ ಹಾಕಿ ತಗಲಾಕ್ಕೊಂಡಿದ್ದಾನೆ..

ಇದನ್ನೂ ಓದಿ; ಬದಲಾಗ್ತಿದೆಯಾ ಶಿವಮೊಗ್ಗ ರಾಜಕಾರಣದ ಚಿತ್ರಣ; ತೆರೆಮರೆಯ ತಂತ್ರಗಾರಿಕೆ ಏನು..?

ಪತ್ನಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಕೃತ್ಯ;

ವರ್ಷದ ಹಿಂದೆ ಗಂಡ-ಹೆಂಡತಿ ಬೇರೆಯಾಗಿದ್ದರು.. ಇದೇ ಸೇಡಿಗಾಗಿ ಗಂಡ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.. ಕಲಾಶಶಿ ಎಂಬ ಹೆಸರಿನಲ್ಲಿ ಫೇಸ್‌ಬುಕ್‌ ಪೇಜ್‌ ಕ್ರಿಯೇಟ್‌ ಮಾಡಿದ್ದ ಪತಿ ಸತ್ಯನಾರಾಯಣ ರೆಡ್ಡಿ, ಅದರಲ್ಲಿ ಪತ್ನಿಯ ಫೋಟೋ ಹಾಕಿ ಕಾಲ್‌ ಗರ್ಲ್‌ ಎಂಬಂತೆ ಬಿಂಬಿಸಿದ್ದ.. ಜೊತೆಗೆ ಆಕೆಯ ಸಹೋದರನ ನಂಬರ್‌ ಹಾಕಿದ್ದ.. ಇದರಿಂದಾಗಿ ಆಕೆ ಹಾಗೂ ಆಕೆಯ ಸಹೋದರನಿಗೆ ನೂರಾರು ಕರೆಗಳು ಬಂದಿವೆ.. ಎಲ್ಲವೂ ಅಶ್ಲೀಲವಾಗಿ ಮಾತನಾಡಿದ್ದಾರೆ.. ಇದರಿಂದ ನೊಂದ ಮಹಿಳೆಯ ಸಹೋದರ ನಂದಿನಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ; ಹಿಂದೂ ಸಂಸ್ಕೃತಿ ಮೇಲೆ ಕಾಂಗ್ರೆಸ್ ಕಾಕದೃಷ್ಟಿ; ಜೆಡಿಎಸ್ ಆಕ್ರೋಶ

 

Share Post