CrimeDistricts

ಸಂಬಳ ಕೊಟ್ಟು ಕಳ್ಳರನ್ನು ನೇಮಿಸಿಕೊಂಡಿದ್ದ ಹೈಟೆಕ್ ಕಳ್ಳ!

ತುಮಕೂರು; ತಿಂಗಳ ಸಂಬಳ ಕೊಟ್ಟು ಕಳ್ಳತನ ಮಾಡಿಸುತ್ತಿದ್ದ ಹೈಟೆಕ್ ಕಳ್ಳ ಹಾಗೂ ಮೂವರು ಕಳ್ಳರನ್ನು ಪೊಲೀಸರನ್ನು ಬಂಧಿಸಿದ್ದಾರೆ.. ತಿಂಗಳಿಗೆ 20 ಸಾವಿರ ಸಂಬಳಕ್ಕೆ ಕಳ್ಳನನ್ನು ನೇಮಿಸಿಕೊಂಡಿದ್ದ ಬೆಂಗಳೂರಿನ ವ್ಯಕ್ತಿ, ಆತನಿಂದ ಕಳ್ಳತನ ಮಾಡಿಸುತ್ತಿದ್ದ ಎಂದು ತಿಳಿದುಬಂದಿದೆ..

   ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನಲ್ಲಿ ಹಲವೆಡೆ ಬೋರ್ ವೆಲ್ ಕೇಬಲ್ ಕಳ್ಳತನವಾಗಿತ್ತು.. ಈ ಸಂಬಂಧ ತನಿಖೆ ನಡೆಸಿದ ಕೊರಟಗೆರೆ ಪೊಲೀಸರು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಮೂವರನ್ನು ಬಂಧಿಸಿದ್ದಾರೆ.. ಇವರ ವಿಚಾರಣೆ ವೇಳೆ ವ್ಯಕ್ತಿಯೊಬ್ಬ ಸಂಬಳ ಕೊಟ್ಟು ಇವರಿಂದ ಕಳ್ಳತನ  ಮಾಡಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ..

   ಬಂಧಿತ ಮೂವರು ಆರೋಪಿಗಳನ್ನ ವಿಚಾರಣೆ ನಡೆಸಿದಾಗ, ತಿಂಗಳಿಗೆ 20 ಸಾವಿರ ರೂ. ಸಂಬಳ ಪಡೆದು ಕಳ್ಳತನ ಮಾಡುತ್ತಿದ್ದೇನೆ ಎಂದು ಒಬ್ಬ ಆರೋಪಿ ಹೇಳಿದ್ದಾನೆ.. ಆತನ ಮಾಹಿತಿ ಮೇರೆಗೆ ಸಂಬಳಕ್ಕೆ ಇಟ್ಟುಕೊಂಡಿದ್ದ ವೆಂಕಟೇಶ್ ಎಂಬಾತನನ್ನು ಬಂಧಿಸಲಾಗಿದೆ..

 

Share Post