ನಾಡಿಗೆ ಬಂದ ಕಾಡಾನೆಗಳು; ಮೈಸೂರು ಜಿಲ್ಲೆಯಲ್ಲಿ ರೈತರ ಬೆಳೆ ನಾಶ
ಮೈಸೂರು: ಮೈಸೂರು ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ರಾತ್ರಿ ವೇಲೆ ರೈತರ ಬೆಳೆಗಳಿಗೆ ಲಗ್ಗೆ ಇಟ್ಟು ನಾಶ ಮಾಡುತ್ತಿವೆ. ಕಳೆದ ರಾತ್ರಿ ಕೂಡಾ ಮೈಸೂರು ಜಿಲ್ಲೆಯ ಎರಡು ಕಡೆ ಕಾಡಾನೆಗಳು ಬೆಳೆಗಳನ್ನು ಹಾನಿ ಮಾಡಿವೆ. ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿ ಪೆಂಜಳ್ಳಿ ಗ್ರಾಮ ಹಾಗೂ ನಂಜನಗೂಡು ತಾಲ್ಲೂಕಿನ ಯಡಿಯಾಲ ವಲಯದ ಮಡುವಿನಹಳ್ಳಿಯಲ್ಲಿ ಕಾಡಾನೆಗಳು ದಾಳಿ ನಡೆಸಿವೆ. ಬೆಳಗಳನ್ನು ನಾಶ ಮಾಡಿವೆ.
ಅನೆ ದಾಳಿಯಿಂದ ಕೋಪಗೊಂಡಿರುವ ಮಡುವಿನಹಳ್ಳಿಯ ರೈತರು ವಿಷದ ಬಾಟಲಿ ಹಿಡಿದು ಅರಣ್ಯ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ರೇಲ್ವೆ ಹಳಿ ತಡೆಗೋಡೆ ಅಲ್ಲಲ್ಲಿ ಮುರಿದಿರುವುದರಿಂದ ಆನೆಗಳು ಸುಲಭವಾಗಿ ದಾಳಿ ನಡೆಸುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಪೆಂಜನಹಳ್ಳಿಗೆ ಬಂದಿದ್ದ ಎರಡು ಆನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗಟ್ಟಿದ್ದಾರೆ.