ಪತ್ನಿಯ ಕೊಲೆ ಮಾಡಿ, ಮೃತದೇಹದೊಂದಿಗೆ ಸೆಲ್ಫಿ ತೆಗೆದ ಪಾಪಿ ಪತಿ!
ಲಖನೌ; ಪತ್ನಿಯನ್ನು ಕೊಲೆ ಮಾಡಿದ ಪಾಪಿ, ಮೃತದೇಹದೊಂದಿಗೆ ಸೆಲ್ಫಿ ತೆಗೆದು ಆಕೆಯ ಪೋಷಕರಿಗೆ ಕಳುಹಿಸಿದ್ದಾನೆ.. ಉತ್ತರ ಪ್ರದೇಶದ ಗಾಜಿಯಾಬಾದ್‌ನ ಅಂಕುರ್ ವಿಹಾರ್ ಪ್ರದೇಶದಲ್ಲಿ ಈ ಕೃತ್ಯ ಎಸಗಲಾಗಿದೆ.
ವೇಲ್ ನಿಂದ ಕುತ್ತಿಗೆ ಬಿಗಿದು ಪತ್ನಿಯನ್ನು ಸಾಯಿಸಿರುವ ಆರೋಪಿ, ದೇಹವನ್ನು ತೊಡೆ ಮೇಲಿಟ್ಟುಕೊಂಡು ಸೆಲ್ಫಿ ತೆಗೆದಿದ್ದಾನೆ.. ಬಳಿಕ ಆ ಫೋಟೋವನ್ನು ಪತ್ನಿಯ ಪೋಷಕರು ಹಾಗೂ ಸಂಬಂಧಿಕರಿಗೆ ಕಳುಹಿಸಿದ್ದಾನೆ..
ಫೋಟೋನೋಡಿದವರಿಗೆ ಏನಾಗಿದೆ ಎಂದು ಅರ್ಥವಾಗಿಲ್ಲ.. ನಂತರ ಕೊಲೆ ಮಾಡಿ ಸಲ್ಫಿ ಮಾಡಿದ್ದಾನೆ ಅನ್ನೋದು ಗೊತ್ತಾಗಿದೆ.. ಕೂಡಲೇ ಸಂಬಂಧಿಕರು ಸ್ಥಳಕ್ಕೆ ಆಗಮಿಸಿದ್ದಾರೆ.. ಅಷ್ಟರಲ್ಲಿ ಕೊಲೆಗಾರ ಕೂಡಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ..
ಪ್ರಿಯಾ ಎಂಬಾಕೆಯೇ ಕೊಲೆಯಾದವಳು.. ಆಕೆ ಪತಿ ಶ್ಯಾಮ್ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಪತ್ನಿ ತನ್ನೊಂದಿಗೆ ಸಂಸಾರ ನಡೆಸುತ್ತಿಲ್ಲ ಎಂದು ಗಂಡ ಬೇಸರಗೊಂಡಿದ್ದ. ಇದೇ ಕಾರಣಕ್ಕೆ ಈ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ..