CrimeDistricts

ಪೊಲೀಸ್‌ ಕ್ವಾಟರ್ಸ್‌ನಲ್ಲೇ ಕಳ್ಳರ ಕೈಚಳಕ; 10 ಲಕ್ಷ ದೋಚಿದ್ದವರು ಮನೆ ಎದುರಲ್ಲೇ ಇದ್ದರು!

ರಾಯಚೂರು; ರಾಯಚೂರು ನಗರದ ಪೊಲೀಸ್‌ ಕ್ವಾಟರ್ಸ್‌ನ ನಗರ ಪಶ್ಚಿಮ ಠಾಣೆಯ ಮಹಿಳಾ ಹೆಡ್​ ಕಾನ್ಸ್​ಟೇಬಲ್  ಮಹಾದೇವಿ ಮನೆಯಲ್ಲಿ 10 ಲಕ್ಷ ರೂಪಾಯಿ ಕಳವಾಗಿತ್ತು.. ಮೇ 22 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಒಡೆದು ಹಣ ದೋಚಲಾಗಿತ್ತು.. ಇದಾದ ಒಂದು ವಾರದ ನಂತರ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.. ಆರೋಪಿಗಳು ಹೆಡ್‌ ಕಾನ್ಸ್‌ಟೇಬಲ್‌ ಮಹಾದೇವಿ ಅವರ ಮನೆಯ ಎದುರಿಗೇ ಇದ್ದರು.. ಏನೂ ತಿಳಿಯದಂತೆ ಕೆಲಸ ಮಾಡಿಕೊಂಡಿದ್ದ ಅವರನ್ನು ಪೊಲೀಸರು ಪತ್ತೆ ಹಚ್ಚಿದ್ದೇ ರೋಚಕವಾಗಿದೆ..

ಮಹಾದೇವಿಯವರು ರಾಯಚೂರಿನ ಮಾರ್ಕೆಟ್‌ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲು ಮಾಡಿದ್ದರು.. ತನಿಖೆ ಶುರು ಮಾಡಿದ ಪೊಲೀಸರು ತೀವ್ರ ತನಿಖೆ ನಡೆಸಿದಾಗ ಹಲವು ತಾಂತ್ರಿಕ ಆಧಾರಗಳು ಸಿಕ್ಕವು.. ಹೆಡ್ ಕಾನ್ಸ್​ಟೇಬಲ್​​ ಮಹಾದೇವಿ ಅವರು ಬೇರೊಂದು ಕಡೆ ಖರೀದಿ ಮಾಡಿದ್ದ ತಮ್ಮ ಫ್ಲಾಟ್ ಮಾರಾಟ ಮಾಡಿ ಆ ಹಣ ಮನೆಯಲ್ಲಿಟ್ಟಿದ್ದರು.. ಈ ಬಗ್ಗೆ ತಿಳಿದವರೇ ಈ ಕೃತ್ಯ ಎಸಗಿದ್ದಾರೆಂದು ಭಾವಿಸಿದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.. ಪೊಲೀಸರ ಊಹೆ ಸರಿಯಾಗಿದ್ದು, ಅವರೇ ಕಳ್ಳತನ ಮಾಡಿರೋದು ಅಂತ ಒಪ್ಪಿಕೊಂಡಿದ್ದಾರೆ.. ವಿಶ್ವನಾಥ್, ಗೋವಿಂದ ಹಾಗೂ ಮಹೇಶ್ ಎಂಬುವವರನ್ನು ಬಂಧಿಸಲಾಗಿದ್ದು, ಅವರಿಂದ 8 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ..

ಮೂವರೂ ಆರೋಪಿಗಳು ಮಹಾದೇವಿಯವರು ವಾಸವಿರುವ ಪೊಲೀಸ್‌ ಕ್ವಾಟರ್ಸ್‌ ಎದುರಿಗೇ ಪೊಲೀಸ್ ವಸತಿ ನಿಲಯಗಳ ಹೊಸ ಕಟ್ಟಡ ಕೆಲಸ ನಡೆಯುತ್ತಿತ್ತು.. ಅದರಲ್ಲಿ ಕೂಲಿಕಾರ್ಮಿಕರಾಗಿದ್ದರು.. ಇವರಿಗೆ ಮಹಾದೇವಿ ಚೆನ್ನಾಗಿ ಪರಿಚಯವಾಗಿತ್ತು.. ಕೂಲಿ ಕಾರ್ಮಿಕರು ಅಂತ ಅವರಿಗೆ ಮಹಾದೇವಿ ಉಪಹಾರ, ಟೀ, ಕಾಫಿ, ಊಟ ಎಲ್ಲವನ್ನೂ ಕೊಡುತ್ತಿದ್ದರು.. ಇದರ ನಿಯತ್ತಿಲ್ಲದೆ ಮೂವರೂ ಮಹಾದೇವಿ ಇಲ್ಲದಾಗ ಮನೆ ಕನ್ನ ಹಾಕಿ ಹಣ ದೋಚಿದ್ದರು..

ಮಹಾದೇವಿಯವರು ಮನೆಯಲ್ಲಿ ಎರಡು ನಾಯಿಗಳನ್ನು ಸಾಕಿದ್ದರು.. ಆದ್ರೆ ಈ ಮೂವರನ್ನೂ ನಾಯಿಗಳು ನೋಡಿದ್ದರಿಂದಾಗಿ ಬೊಗಳಿಲ್ಲ..

 

Share Post