ರೈಲಿನಲ್ಲಿದ್ದ 110 ಕನ್ನಡಿಗರೆಲ್ಲರೂ ಸೇಫ್; ಇವರು ಬಚಾವಾಗಿದ್ದೇ ಒಂದು ಪವಾಡ..!
ಬೆಂಗಳೂರು; ಒಡಿಶಾದಲ್ಲಿ ಭೀಕರ ಸರಣಿ ರೈಲು ಅಪಘಾತದಲ್ಲಿ 110 ಕನ್ನಡಿಗರು ಪವಾಡ ಸದೃಶ ರೀತಿಯಲ್ಲಿ ಬಚಾವಾಗಿದ್ದಾರೆ. ದಾರಿ ಮಧ್ಯೆ ಎಂಜಿನ್ ಬದಲಾಯಿಸಿದ್ದರಿಂದ ಹಿಂದೆ ಇದ್ದ ಭೋಗಿಗಳು ಮುಂದೆ ಬಂದಿದ್ದರಿಂದ ಇವರೆಲ್ಲರೂ ಯಾವುದೇ ತೊಂದರೆಯಿಲ್ಲದೇ ಬದುಕುಳಿದಿದ್ದಾರೆ.
ಒಡಿಶಾದ ಬಾಲಸೋರ್ ಜಿಲ್ಲೆ ಬಹನಾಗ ಬಳಿ ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರಿನ ಬೈಯಪ್ಪನಹಳ್ಳಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಹೊರಟಿದ್ದ ಹೌರಾ ಎಕ್ಸಪ್ರೆಸ್ ಮತ್ತು ಗೂಡ್ಸ್ ರೈಲುಗಳ ಮಧ್ಯೆ ಅಪಘಾತ ಸಂಭವಿಸಿದೆ. ದುರಂತದಲ್ಲಿ 233 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು ಸಾವಿರ ಮಂದಿ ಗಾಯಗೊಂಡಿದ್ದು, ಆಸ್ಪತ್ರೆ ಸೇರಿದ್ದಾರೆ. ಸಮಾಧಾನದ ವಿಷಯ ಎಂದರೆ ಹೌರಾ ಎಕ್ಸ್‌ಪ್ರೆಸ್‌ನಲ್ಲಿದ್ದ 110 ಕನ್ನಡಿಗರು ಬಚಾವಾಗಿವುದು.
ಬೆಂಗಳೂರಿನಿಂದ ಹೊರಟಿದ್ದ ಹೌರಾ ಎಕ್ಸ್‌ಪ್ರೆಸ್‌ನಲ್ಲಿ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲ್ಲೂಕಿನ 110 ಮಂದಿ ಪ್ರಯಾಣಿಸುತ್ತಿದ್ದರು. ಅವರೆಲ್ಲಾ ಕೊನೆಯ S5, S6, S7 ಬೋಗಿಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ಆದ್ರೆ ನಿನ್ನೆ ಮಧ್ಯಾಹ್ನ ಕೋಲ್ಕತ್ತಾ ಬಳಿ ಎಂಜಿನ್ ಬದಲಾಗಿದೆ. ಆದ್ರೆ ಕನ್ನಡಿಗರು ಇದ್ದ ಬೋಗಿಗಳು ಮುಂದಕ್ಕೆ ಬಂದಿವೆ. ಆದ್ರೆ ಅಪಘಾತದ ವೇಳೆ ಕೊನೆಯ ನಾಲ್ಕು ಬೋಗಿಗಳು ಹಳಿ ತಪ್ಪಿ ಕೆಳಗೆ ಬಿದ್ದಿವೆ. ಹಿಂದಿನ ಬೋಗಿಗಳಲ್ಲೇ ಇದ್ದಿದ್ದರೆ ಕನ್ನಡಗರಿಗೆ ಹೆಚ್ಚಿನ ಅಪಾಯ ಸಂಭವಿಸುತ್ತಿತ್ತು. ಆದ್ರೆ ಅದೃಷ್ಟಶಾತ್ ಎಂಜಿನ್ ಬದಲಾಗಿದ್ದರು ಎಲ್ಲರೂ ಸೇಫಾಗಿದ್ದಾರೆ.
SWR ನೀಡಲಾದ ಸಹಾಯವಾಣಿ
ಬೆಂಗಳೂರು(Bangalore): 080-22356409
ಬಂಗಾರಪೇಟೆ(Bangarapet): 08153 255253
ಕುಪ್ಪಂ(Kuppam): 8431403419
ಎಸ್ಎಮ್ವಿಬಿ(SMVB) : 09606005129
ಕೆಜೆಎಮ್(KJM):+91 88612 03980