CrimeNational

ನಟಿ ಶೆಹನಾಜ್‌ ಗಿಲ್‌ ತಂದೆಗೆ ಕೊಲೆ ಬೆದರಿಕೆ

ಪಂಜಾಬ್‌; ನಟಿ ಶೆಹನಾಜ್ ಗಿಲ್ ತಂದೆ ಸಂತೋಖ್ ಸಿಂಗ್ ಅವರಿಗೆ ಅಪರಿಚಿತ ವ್ಯಕ್ತಿ  ಕೊಲೆ ಬೆದರಿಕೆ ಹಾಕಿದ್ದಾನೆ. ಮೊಬೈಲ್‌ ಕರೆ ಮಾಡಿರುವ ಅನಾಮಿಕ, ದೀಪಾವಳಿ ಒಳಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಶೆಹನಾಜ್ ಗಿಲ್ ಅವರ ತಂದೆಗೆ ಬಿಯಾಸ್‌ನಿಂದ ತರಂತನ್‌ಗೆ ಹೋಗುತ್ತಿದ್ದ ವೇಳೆ  ಈ ಬೆದರಿಕೆ ಕರೆ ಬಂದಿದೆ. ವರದಿಗಳ ಪ್ರಕಾರ, ಅಪರಿಚಿತ ವ್ಯಕ್ತಿ ಮೊದಲು ಸಂತೋಖ್​ ಅವರನ್ನು ನಿಂದಿಸಿದ್ದು, ನಂತರ ನಿಮ್ಮ ಮನೆಗೆ ನುಗ್ಗಿ ಕೊಲೆ ಮಾಡುತ್ತೇನೆ ಎಂದು ಬೆದರಿಸಿದ್ದಾನೆ. ಘಟನೆ ನಂತರ ಸಂತೋಖ್ ಸ್ಥಳೀಯ​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

      2021ರಲ್ಲಿ ಕೂಡಾ ಸಂತೋಖ್ ಸಿಂಗ್ ಸುಖ್ ಅವರನ್ನು ಕೊಲ್ಲಲು ಯತ್ನಿಸಲಾಗಿತ್ತು. 2021ರ ಡಿಸೆಂಬರ್ 25ರಂದು, ಇಬ್ಬರು ಅಪರಿಚಿತ ವ್ಯಕ್ತಿಗಳು ಅವರ ಮೇಲೆ ಹಲ್ಲೆ ನಡೆಸಿದ್ದರು. ನಂತರ ಸಂತೋಖ್​ ಮೇಲೆ ಗುಂಡು ಹಾರಿಸಿದ್ದರು.

Share Post