ಗಾಯಾಳು ಪತಿಯನ್ನು ಬೆನ್ನ ಮೇಲೆ ಹೊತ್ತು ಸಾಗಿದ ಮಹಿಳೆ!
ಮಧ್ಯಪ್ರದೇಶ; ಬಡವರಿಗಾಗಿ ಸರ್ಕಾರಿ ಆಸ್ಪತ್ರೆಗಳನ್ನು ಕಟ್ಟಲಾಗುತ್ತದೆ.. ಆದ್ರೆ ಅಲ್ಲಿ ಸರಿಯಾದ ವ್ಯವಸ್ಥೆಗಳನ್ನು ಮಾಡೋದಿಲ್ಲ.. ವ್ಯವಸ್ಥೆಗಳಿದ್ದರೂ ಅಲ್ಲಿಂದ ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತನೆ ಮಾಡುತ್ತಾರೆ.. ಇದಕ್ಕೊಂದು ಉದಾಹರಣೆಯೇ ಈ ಸ್ಟೋರಿ.. ಮಹಿಳೆಯೊಬ್ಬರು ತನ್ನ ಗಂಡನ ಕಾಲು ಮುರಿದಿದ್ದರಿಂದ ಆಸ್ಪತ್ರೆಗೆ ಕರೆತಂದಿದ್ದರು.. ಮಧ್ಯಪ್ರದೇಶದ ಭಿಂಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಕರೆತರಲಾಗಿತ್ತು.. ಆದ್ರೆ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಕರೆದುಕೊಂಡು ಹೋಗು ಸ್ಟ್ರೆಚರ್ ಇಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ.. ಇದರಿಂದಾಗಿ ಮಹಿಳೆ ತನ್ನ ಗಂಡನನ್ನು ಬೆನ್ನ ಮೇಲೆ ಹೊತ್ತುಕೊಂಡೇ ಸಾಗಿದ್ದಾಳೆ..
ಇದನ್ನೂ ಓದಿ; 7ನೇ ತರಗತಿ ಬಾಲಕಿ ಗ್ಯಾಸ್ ಡೆಲಿವರಿ ಬಾಯ್ ಮನೆಯಲ್ಲಿ ಅನುಮಾನಾಸ್ಪದ ಸಾವು!
ಒಪಿಡಿಯಿಂದ ಶಸ್ತ್ರಚಿಕಿತ್ಸಾ ವಾರ್ಡ್ ಸುಮಾರು 50 ಮೀಟರ್ ದೂರದಲ್ಲಿದೆ.. ಅಲ್ಲಿನ ಸಿಬ್ಬಂದಿ ಸಹಾಯ ಮಾಡಿದ್ದರೆ, ಕಾಲು ಮುರಿದ ವ್ಯಕ್ತಿಯನ್ನು ಅಲ್ಲಿಗೆ ಕರೆದುಕೊಂಡು ಹೋಗಬಹುದಿತ್ತು.. ಆದ್ರೆ ಆಸ್ಪತ್ರೆ ಸಿಬ್ಬಂದಿ ಬಡವರು ಎಂಬ ಕಾರಣಕ್ಕೆ ಸಹಾಯಕ್ಕೆ ಬಂದಿಲ್ಲ.. ಹೀಗಾಗಿ ಮಹಿಳೆಯೇ ತನ್ನ ಗಂಡನನ್ನು ಹೊತ್ತುಕೊಂಡು ಸಾಗಿದ್ದಾಳೆ.. ನೋಡಿದವರು ಕೂಡಾ ಸಹಾಯಕ್ಕೆ ಬರದೆ ಮೊಬೈಲ್‌ನಲ್ಲಿ ದೃಶ್ಯ ಚಿತ್ರೀಕರಿಸಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ..
ಇದನ್ನೂ ಓದಿ; ಹೆಂಡತಿಯ ಈ ಮೂರು ಅಭ್ಯಾಸಗಳು ಗಂಡನಿಗೆ ಇಷ್ಟವಾಗೋದಿಲ್ಲವಂತೆ..!