BengaluruCrime

ಚಾಲಕರ ಕಿತ್ತಾಟ; ಚಾಲಕನ ಮೇಲೆ ಕಾರು ನುಗ್ಗಿಸಿದ ಆಸಾಮಿ!

ಬೆಂಗಳೂರು; ಕಾರು ಚಾಲಕರಿಬ್ಬರ ನಡುವೆ ಜಗಳ ನಡೆದಿದ್ದು, ಕಾರಿಗೆ ಅಡ್ಡ ನಿಂತಿದ್ದ ಮತ್ತೊಬ್ಬ ಕಾರು ಚಾಲಕನನ್ನು ಬಾನೆಟ್‌ ಮೇಲೆ ಹೊತ್ತೊಯ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನೋವಾ ಕಾರು ಚಾಲಕ ಹಾಗೂ ಇಟಿಯಾಸ್ ಕಾರು ಚಾಲಕನ ನಡುವೆ ಈ ಗಲಾಟೆ ನಡೆದಿದೆ.

ಹೆಬ್ಬಾಳ ಫ್ಲೈಓವರ್‌ ಮೇಲೆ ಇಟಿಯಾಸ್ ಕಾರು ಚಾಲಕನನ್ನು ಇನೋವಾ ಡ್ರೈವರ್ ಬಾನೆಟ್ ಮೇಲೆ ಹೊತ್ತೊಯ್ದಿದ್ದಾನೆ. ಅಂದರೆ ಕಾರಿಗೆ ಅಡ್ಡ ಬಂದವನನನ್ನು ಕಾರಿನಿಂದ ಗುದ್ದಿಕೊಂಡು ಸ್ವಲ್ಪ ದೂರ ಹೋಗಿದ್ದಾನೆ. ಈ ದೃಶ್ಯಗಳನ್ನು ಇತರ ಕಾರುಗಳಲ್ಲಿದ್ದವರು ಚಿತ್ರೀಕರಿಸಿಕೊಂಡಿದ್ದಾರೆ. ಇದರ ವಿಡಿಯೋಗಳು ಈಗ ಎಲ್ಲೆಡೆ ವೈರಲ್‌ ಆಗುತ್ತಿವೆ.

ನವೆಂಬರ್ 29ರಂದು ನಡೆದ ಘಟನೆ ಇದಾಗಿದ್ದು, ತಡವಾಡಿ ಬೆಳಕಿಗೆ ಬಂದಿದೆ.

Share Post