CrimePolitics

ಸಿದ್ದರಾಮಯ್ಯ ಭವಿಷ್ಯ ಇಂದೇ ನಿರ್ಧಾರ!; ಹೇಗಿರುತ್ತೆ ಇವತ್ತಿನ ವಾದ-ಪ್ರತಿವಾದ..?

ಬೆಂಗಳೂರು; ಇಂದು ಬಹುತೇಕ ಸಿಎಂ ಸಿದ್ದರಾಮಯ್ಯ ಅವರ ಭವಿಷ್ಯ ನಿರ್ಧಾರವಾಗಲಿದೆ.. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್‌ ಅನುಮತಿ ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್‌ ಅರ್ಜಿಯ ವಿಚಾರಣೆ ಅಂತಿಮ ಹಂತಕ್ಕೆ ತಲುಪಿದೆ.. ಇಂದು ಹೈಕೋರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ವಾದ ಮಂಡಿಸಲಿದ್ದಾರೆ.. ಈ ವಾದ ಮುಗಿದ ಮೇಲೆ ನ್ಯಾಯಮೂರ್ತಿಗಳು ಆದೇಶ ಹೊರಡಿಸಬಹುದು.. ಬಹುತೇಕ ಇವತ್ತೇ ಆದೇಶ ಹೊರಬೀಳುವ ಸಾಧ್ಯತೆ ಇಲ್ಲ.. ಇಲ್ಲದೆ ಇದ್ದರೆ ವಿಚಾರಣೆ ಮುಗಿಸಿ ಆದೇಶ ಕಾಯ್ದಿರಿಸಬಹುದು.. ಏನೇ ಆದರೂ ಇಂದು ಸಿದ್ದರಾಮಯ್ಯ ಅವರ ಭವಿಷ್ಯ ನಿರ್ಧಾರವಾಗುತ್ತದೆ..
ಇಂದು ಮಧ್ಯಾಹ್ನ 12 ಗಂಟೆಗೆ ಅಭಿಷೇಕ್‌ ಮನು ಸಿಂಘ್ವಿ ಅವರು ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದ ಮುಂದೆ ವಾದ ಮಂಡನೆ ಮಾಡಲಿದ್ದಾರೆ.. ಈ ವಾದ ಹೇಗಿರುತ್ತೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.. ಈಗಾಗಲೇ ನ್ಯಾಯಮೂರ್ತಿಗಳು ಸೆಪ್ಟೆಂಬರ್‌ 12ಕ್ಕೆ ವಿಚಾರಣೆ ಮುಗಿಸಿಬಿಡೋಣ ಎಂದು ಹೇಳಿದ್ದರು.. ಹೀಗಾಗಿ ಇಂದೇ ವಿಚಾರಣೆ ಮುಗಿಯೋ ಸಾಧ್ಯತೆ ಇದೆ.. ಅಭಿಷೇಕ್‌ ಮನು ಸಿಂಘ್ವಿ ವಾದ ಮುಗಿದ ಬಳಿಕ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರವಾಗಿ ಸುಪ್ರೀಂಕೋರ್ಟ್‌ನ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಕೂಡಾ ಅಂತಿಮವಾಗಿ ವಾದ ಮಾಡಲಿದ್ದಾರೆ..

 

Share Post