Youtube ನೋಡಿ ಪತ್ನಿಗೆ ಡೆಲಿವರಿ ಮಾಡಿದ – ಈಗ ಪೊಲೀಸರ ಅತಿಥಿ
ಹೈದರಾಬಾದ್ : Youtube ನೋಡಿಕೊಂಡು ಡೆಲಿವರಿ ಮಾಡಿದ ಭೂಪ ಈಗ ಪೊಲೀಸರ ಅತಿಥಿಯಾಗಿದ್ದಾನೆ. Youtube ನೋಡಿಕೊಂಡು ಡೆಲಿವರಿ ಮಾಡಿಸಿದ ಲೋಕನಾಥನ್ ಮಗುವಿನ ಸಾವಿಗೆ ಕಾರಣನಾಗಿದ್ದಾನೆ.
ಹೆಂಡತಿ ತೀವ್ರ ರಕ್ತಸ್ರಾವದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಣಿಪೇಟೆಯ ಪೊಲೀಸರು ಈತನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
೨೦೨೦ ರಲ್ಲಿ ಲೋಕನಾಥನ್ ಮತ್ತು ಗೋಮತಿ ಮದುವೆಯಾಗಿದ್ದರು. ಡಾಕ್ಟರ್ ಪ್ರಕಾರ ಡಿ.೧೩ರಂದೇ ಡೆಲಿವರಿ ಆಗಬೇಕಿತ್ತು. ಗೋಮತಿಗೆ ಡಿ ೧೮ರಂದು ಹೆರಿಗೆ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸಿದ್ದ. ಸಹೋದರಿ ಗೀತಾ ಜೊತೆ ಸೇರಿ ಯೂಟ್ಯೂಬ್ ನೋಡಿಕೊಂಡು ಮನೆಯಲ್ಲಿ ತಾನೇ ಹೆರಿಗೆ ಮಾಡಲು ಮುಂದಾಗಿದಾನೆ.
ಗರ್ಭದಿಂದ ಹೊರಬಂದಾಗಲೇ ಮಗು ಸತ್ತುಹೋಗಿತ್ತು. ಇನ್ನು ತೀವ್ರ ರಕ್ತಸ್ರಾವದಿಂದ ಗೋಮತಿ ಬಳಲಿದ ಕಾರಣ ಪ್ರಥಮ ಚಿಕಿತ್ಸಾಲಯಕ್ಕೆ ಕರೆದೊಯ್ದಿದ್ದಾನೆ. ಆದರೆ ಅಲ್ಲಿನ ವೈದ್ಯರು ಆಕೆಯನ್ನು ದೊಡ್ಡ ಆಸ್ಪತ್ರೆಗೆ ಶಿಫ್ಟ್ ಮಾಡಲು ತಿಳಿಸಿದ್ದಾರೆ. ಸದ್ಯ ಗೋಮತಿ ವೆಲ್ಲೂರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮಗುವನ್ನು ಕಳೆದುಕೊಂಡ, ಪತ್ನಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇತ್ತ ಲೋಕನಾಥನ್ ಪೊಲೀಸರ ಅತಿಥಿಯಾಗಿದ್ದಾನೆ.