CrimeDistricts

ಕಣಿವೆಗೆ ಉರುಳಿಬಿದ್ದ ಗೂಡ್ಸ್‌ ವಾಹನ; 17 ಮಹಿಳೆಯರು ಸೇರಿ 18 ಮಂದಿ ದುರ್ಮರಣ!

ಕಬೀರ್‌ ಧಾಮ್‌; ಛತ್ತಿಸ್‌ ಗಢದಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದು, ದುರಂತದಲ್ಲಿ 17 ಮಹಿಳೆಯರು ಸೇರಿ 18 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾಎ.. ಮಿನಿ ಗೂಡ್ಸ್‌ ವಾಹನ ಚಾಲಕನ ನಿಯಂತ್ರಣ ತಪ್ಪಿ ಕಣಿವೆ ಉರುಳಿಬಿದ್ದ ಕಾರಣದಿಂದ ಈ ದುರಂತ ನಡೆದಿದೆ..
ಛತ್ತಿಸ್‌ಗಢದ ಕಬೀರ್‌ ಧಾಮ್‌ ಜಿಲ್ಲೆಯಲ್ಲಿ ಈ ದುರಂತ ನಡೆದಿದೆ.. ಜಜ್ದೂರು ಪೊಲೀಸ್​ ಠಾಣೆ ವ್ಯಾಪ್ತಿಯ ಬಹಪಾನಿ ಗ್ರಾಮದ ಬಳಿಯ ಬಂಜಾರಿ ಘಾಟ್​ ಬಳಿ ಮಿನಿ ಗೂಡ್ಸ್‌ ವಾಹನ ಕಣಿವೆಗೆ ಉರುಳಿಬಿದ್ದಿದ್ದೆ.. ನಿನ್ನೆ ಮಧ್ಯಾಹ್ನ ಈ ದುರ್ಘಟನೆ ನಡೆದಿದ್ದು, ವಾಹನದಲ್ಲಿದ್ದವರಲ್ಲಿ ಕೇವಲ ನಾಲ್ಕು ಜನ ಬದುಕುಳಿದಿದ್ದಿದ್ದು, ಅವರ ಸ್ಥಿತಿಊ ಗಂಭೀರವಾಗಿದೆ ಎಂದು ತಿಳಿದುಬಂದಿದೆ..
ಜನರು ಸರಕು ತುಂಬುವ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದರು.. ಈ ವೇಳೆ ವಾಹನ ಸ್ಕಿಡ್‌ ಆಗಿದ್ದು, ಚಾಲಕನ ನಿಯಂತ್ರಣ ತಪ್ಪಿದೆ.. ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸ ಮೃತದೇಹಗಳನ್ನು ಹೊರತೆಗೆದಿದ್ದಾರೆ.. ನಾಲ್ವರು ಗಾಯಾಳುಗಳನ್ನು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ..

Share Post