National

ಅಮೆರಿಕಾದಿಂದ ಹೈ-ಫೈ ಗಾಂಜಾ ಆಮುದು-ಎನ್‌ಸಿಬಿ ಅಧಿಖಾರಿಗಳ ಕೈಗೆ ಸಿಕ್ಕಿಬಿದ್ದ ಮಾಲು

ವಿಶಾಖಪಟ್ಟಣಂ ಏಜೆನ್ಸಿಯಿಂದಲೇ ಗಾಂಜಾ ಸಾಗಾಟ ನಡೆಯಯುತ್ತಿದೆ ಎಂದು ತಿಳಿದಿದ್ದ ಅಧಿಕಾರಿಗಳಿಗೆ ಡ್ರಗ್ಸ್ ಮಾಫಿಯಾ ಶಾಕ್‌ ನೀಡಿದೆ. ರಾಜ್ಯದಿಂದ ಅಲ್ಲ ಒಂದೇ ಸಲ ಅಂತರಾಷ್ಟ್ರೀಯ ಮಟ್ಟದಿಂದ ಗಾಂಹಾ ಸಾಗಾಟ ನಡೀತಿದೆ ಅದೂ ಹೈ-ಫೈ ಗಾಂಜಾ..ಯುಎಸ್‌ನಿಂದ ಹೈದರಾಬಾದ್‌ಗೆ ಬಂದ ಉತ್ತಮ ಗುಣಮಟ್ಟದ ಗಾಂಜಾವನ್ನು ಎನ್‌ಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಅಮೆರಿಕದಿಂದ ಬಂದ ಕೊರಿಯರ್ ಬಾಕ್ಸ್ ಅನುಮಾನಾಸ್ಪದ ಕಂಡುಬಂದಿದ್ದರಿಂದ ವಿಮಾನ ನಿಲ್ದಾಣದ ಸಿಬ್ಬಂದಿ ಎನ್‌ಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಪಾರ್ಸೆಲ್ ತೆರೆದು ನೋಡಿದ್ರೆ ಅಧಿಕಾರಿಗಳಿಗೇ ಶಾಕ್‌ ಕಾದಿದೆ. 420 ಗ್ರಾಂ ಹೈ-ಫೈ ಗಾಂಜಾ ಪತ್ತೆಯಾಗಿದೆ. ಮಾರುಕಟ್ಟೆಯಲ್ಲಿ ಇದರ ಮೌಲ್ಯ 15 ಲಕ್ಷ ರೂಪಾಯಿ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ವಶಪಡಿಸಿಕೊಂಡ ಗಾಂಜಾವನ್ನು ಕಾಲೇಜು ವಿದ್ಯಾರ್ಥಿಗಳು ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಆರೋಪಿಗಳು ಈ ಹಿಂದೆ ಅಮೆರಿಕದಿಂದ ಗಾಂಜಾ ಆಮದು ಮಾಡಿಕೊಂಡು ಹೈದರಾಬಾದ್ ಹಾಗೂ ಇತರೆ ನಗರಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಘಟನೆ ಸಂಬಂಧ ಇಬ್ಬರು ಶಂಕಿತರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಈ ಹಿಂದೆ ವಿವಿಧ ದೇಶಗಳಿಂದ ಮಾದಕ ದ್ರವ್ಯಗಳನ್ನು ಆಮದು ಮಾಡಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವುಗಳನ್ನು ಹಲವು ನಗರಗಳಿಗೆ ಸರಬರಾಜು ಮಾಡುತ್ತಿರುವುದು ಕಂಡುಬಂದಿದೆ. ಡಾರ್ಕ್ ನೆಟ್ ಮೂಲಕ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಆರ್ಡರ್ ಮಾಡುವುದನ್ನು ಮುಂದುವರಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Share Post