CrimeNational

ಅತ್ತೆ ಮನೆಗೆ ಸರ್ಕಾರಿ ಬಸ್‌ ಓಡಿಸಿಕೊಂಡು ಬಂದ ವ್ಯಕ್ತಿ!; ಇಂತವರೂ ಇರ್ತಾರೆ..!

ನಂದ್ಯಾಲ(ಆಂಧ್ರಪ್ರದೇಶ); ಒಮ್ಮೊಮ್ಮೆ ಎಷ್ಟು ಕಾದರೂ ಬಸ್‌ಗಳು ಬರುವುದಿಲ್ಲ.. ಆದ್ರೆ ಸಾರಿಗೆ ಇಲಾಖೆಯನ್ನು ಶಪಿಸುವುದು ಬಿಟ್ಟು ಬೇರೇನೋ ಮಾಡೋದಕ್ಕೆ ಆಗೋದಿಲ್ಲ.. ಆದ್ರೆ, ಇಲ್ಲೊಬ್ಬ ವ್ಯಕ್ತಿ ಅತ್ತೆ ಮನೆಗೆ ಹೋಗೋದಕ್ಕೆ ಬಸ್‌ ನಿಲ್ದಾಣಕ್ಕೆ ಬಂದಿದ್ದ.. ಆದ್ರೆ ಎಷ್ಟು ಹೊತ್ತು ಕಾದರೂ ಬಂದಿಲ್ಲ.. ಹೀಗಾಗಿ ಅಲ್ಲೇ ಹತ್ತಿರದಲ್ಲಿ ಪಾರ್ಕ್‌ ಮಾಡಿದ್ದ ಸರ್ಕಾರಿ ಬಸ್ಸನ್ನೇ ಓಡಿಸಿಕೊಂಡು ಅತ್ತೆ ಮನೆಗೆ ಹೋಗಿದ್ದಾನೆ..

ಇದನ್ನೂ ಓದಿ; 633 ಭಾರತೀಯ ವಿದ್ಯಾರ್ಥಿಗಳು ವಿದೇಶಗಳಲ್ಲಿ ಸಾವು..!

ಆಂಧ್ರಪ್ರದೇಶದ ನಂದ್ಯಾಲ ಬಳಿಯ ವೆಂಕಟಾಪುರದಲ್ಲಿ ಈ ಘಟನೆ ನಡೆದಿದೆ.. ವೆಂಕಟಾಪುರದ ದುರ್ಗಯ್ಯ ಎಂಬ ವ್ಯಕ್ತಿ ತನ್ನ ಅತ್ತೆ ಊರಿನಲ್ಲಿ ನಡೆಯುತ್ತಿದ್ದ ಸಮಾರಂಭಕ್ಕೆ ಹೋಗಬೇಕಿತ್ತು.. ಆತ್ಮಕೂರಿನಿಂದ ಮುಚ್ಚುಮರ್ರಿಗೆ ಹೋಗಲು ಆತ ಬಸ್‌ಗಾಗಿ ಕಾದಿದ್ದಾನೆ.. ಆದ್ರೆ ಎಷ್ಟು ಹೊತ್ತಾದರೂ ಬಂದಿಲ್ಲ.. ಇದೇ ವೇಳೆ ಹತ್ತಿರ ಪೆಟ್ರೋಲ್‌ ಬಂಕ್‌ ಬಳಿ ಆಂಧ್ರ ಸರ್ಕಾರಿ ಬಸ್ಸೊಂದನ್ನು ಪಾರ್ಕ್‌ ಮಾಡಿದ್ದನ್ನು ನೋಡಿದ್ದಾನೆ.. ಅಲ್ಲಿ ಯಾರೂ ಇಲ್ಲದ್ದನ್ನು ನೋಡಿ ಬಸ್‌ ಸ್ಟಾರ್ಟ್‌ ಮಾಡಿ ಅತ್ತೆ ಮನೆ ಮುಚ್ಚುಮರ್ರಿಗೆ ಹೋಗಿದ್ದಾನೆ..

ಇದನ್ನೂ ನೋಡಿ; ಸ್ಕೂಟಿಯಲ್ಲಿ ಹೋಗುವಾಗ ಕೇಳಿಸಿತು ಬುಸ್‌ ಬುಸ್‌ ಶಬ್ದ!; ಡಿಕ್ಕಿಯಲ್ಲಿತ್ತು ಹಾವಿನ ಮೊಟ್ಟೆಗಳು!

ಮುಚ್ಚುಮರ್ರಿಗೆ ಊರಿನ ಅಳಿಯ ಒಬ್ಬನೇ ಬಸ್ಸಿನೊಂದಿಗೆ ಬಂದಿದ್ದು ನೋಡಿ ಊರಿನ ಜನ ಅಚ್ಚರಿಗೊಂಡಿದ್ದಾರೆ.. ನಂತರ ವಿಷಯ ತಿಳಿದು ಎಲ್ಲರೂ ನಗಾಡಿದ್ದಾರೆ.. ಅದಾದ ಮೇಲೆ ಎಲ್ಲರೂ ಸೇರಿ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ.. ನಂತರ ಪೊಲೀಸರು ಆರೋಪಿಯನ್ನು ಸ್ವಲ್ಪ ಹೊತ್ತು ಇರಿಸಿಕೊಂಡು ಬುದ್ದಿ ಹೇಳಿ ಕಳುಹಿಸಿದ್ದಾರೆ. ಇತ್ತ ಬಸ್ಸನ್ನು ಆತ್ಮಕೂರಿಗೆ ಕಳುಹಿಸಲಾಗಿದೆ..

Share Post