CrimeDistricts

ಮದುವೆ ಮೆರವಣಿಗೆ ಹೊರಟಿದ್ದ ಟ್ರ್ಯಾಕ್ಟರ್‌ ಪಲ್ಟಿ; 13 ಮಂದಿ ದಾರುಣ ಸಾವು!

ರಾಜ್‌ಗಢ; ಮಧ್ಯಪ್ರದೇಶದಲ್ಲಿ ದಾರುಣ ಘಟನೆಯೊಂದು ನಡೆದಿದೆ.. ಮದುವೆ ಮೆರವಣಿಗೆ ಹೊರಟಿದ್ದ ಟ್ರ್ಯಾಕ್ಟರ್‌ ಟ್ರ್ಯಾಲಿ ಪಲ್ಟಿಯಾಗಿದ್ದು, 13 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.. ರಾಜ್​ಗಢದ ಪಿಪ್ಲೋಡಿಯಲ್ಲಿ ಈ ದುರಂತ ನಡೆದಿದೆ..

ರಾಜಸ್ಥಾನದಿಂದ ರಾಜ್​ಗಢಕ್ಕೆ ಟ್ರ್ಯಾಕ್ಟರ್‌ನಲ್ಲಿ ಮದುವೆ ಮನೆಯವರು ದಿಬ್ಬಣ ಹೊರಟಿದ್ದರು.. ಇದು ಡ್ರೈವರ್‌ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.. ಇದರಿಂದಾಗಿ 13 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ನಾಲ್ವರು ಮಕ್ಕಳು, ಐವರು ಪುರುಷರು, ನಾಲ್ವರು ಮಹಿಳೆಯರು ಸೇರಿದ್ದಾರೆ..

ಟ್ರ್ಯಾಲಿಯಲ್ಲಿ 35 ಮಂದಿ ಕುಳಿತಿದ್ದರು.. ಇದರಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಭೋಪಾಳ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.. ಉಳಿದ 15 ಮಂದಿಯನ್ನು ರಾಜ್‌ಗಢ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ..

 

Share Post