Districts

ಕಾರು, ಬೈಕ್‌ ನಡುವೆ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

ರಾಯಚೂರು : ಮಾನ್ವಿ ಪಟ್ಟಣದಲ್ಲಿ ರಂಗ್ರೇಜ್‌ (೪೦) ಎಂಬುವ ವ್ಯಕ್ತಿ ಬೈಕ್‌ನಲ್ಲಿ ವೇಗವಾಗಿ ಬಂದು ಬೊಲೆರೊ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.   ಬೈಕ್ ಸವಾರನ ಪತ್ನಿ ಗಂಭೀರವಾಗಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ನಂತರ ಬೊಲೆರೊ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಮಾನ್ವಿ ಪೊಲೀಸ್‌ ಠಾಣೆಯವರು ಪ್ರಕರಣ ದಾಖಲಿಸಿಕೊಂಡು ಚಾಲಕನ ಹುಡುಕಾಟ ನಡೆಸಿದ್ದಾರೆ.

ಅಪಘಾತದ ಹೆಚ್ಚಿನ ಮಾಹಿತಿ ಇನ್ನು ಲಭ್ಯವಾಗಬೇಕಿದೆ. ಚಾಲಕನ ಶೋಧ ಕಾರ್ಯ ಶುರುವಾಗಿದೆ.

Share Post