Politics

ರಾಜ್ಯದಲ್ಲಿ ಕಾಂಗ್ರೆಸ್‌ಗೆ 12 ರಿಂದ 20 ಸ್ಥಾನ, ಬಿಜೆಪಿ-ಜೆಡಿಎಸ್‌ಗೆ 10-14 ಸ್ಥಾನ; ಇದೇನಿದು ಹೊಸ ಸಮೀಕ್ಷೆ..?

ಕರ್ನಾಟಕ; ನಾಳೆ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.. ಇದಕ್ಕಾಗಿ ಎಲ್ಲರೂ ಕಾದು ನೋಡುತ್ತಿದ್ದಾರೆ.. ಇನ್ನು ಜೂನ್‌ 1ರಂದು ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಲಾಗಿತ್ತು.. ಇದರಲ್ಲಿ ಎಲ್ಲಾ ಸಂಸ್ಥೆಗಳೂ ಕೂಡಾ ರಾಜ್ಯದಲ್ಲಿ ಕಾಂಗ್ರೆಸ್‌ಗೆ 5ರಿಂದ 8 ಸ್ಥಾನಗಳಷ್ಟೇ ಬರಲಿದೆ ಎಂದು ಹೇಳಿದ್ದವು.. ಇನ್ನೂ ಕೆಲ ಸಂಸ್ಥೆಗಳು ಐದಕ್ಕಿಂತ ಕಡಿಮೆ ಬರುತ್ತೆ ಎಂದು ಹೇಳಿದ್ದವು.. ಆದ್ರೆ ಇದೀಗ ಬಂದಿರುವ ಮತ್ತೊಂದು ಸಮೀಕ್ಷೆ ಬೇರೆಯದೇ ರೀತಿಯ ವರದಿಯನ್ನು ಪ್ರಕಟಿಸಿದೆ.. ಈ ಸಮೀಕ್ಷೆ ಪ್ರಕಾರ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಪಕ್ಷ 12 ರಿಂದ 20 ಸ್ಥಾನಗಳಲ್ಲಿ ಗೆಲ್ಲಲಿದೆಯಂತೆ!. ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳಿಗೆ 10 ರಿಂದ 14 ಸ್ಥಾನಗಳಷ್ಟೇ ಬರುತ್ತವಂತೆ..!

ZEE NEWS AI ಎಕ್ಸಿಟ್ ಪೋಲ್‌ ವರದಿ ಇದಾಗಿದೆ.. ಇದೇ ಮೊದಲ ಬಾರಿಗೆ ZEE NEWS AI ತಂತ್ರಜ್ಞಾನವನ್ನು ಬಳಸಿಕೊಂಡು ಕ್ಸಿಟ್‌ ಪೋಲ್‌ನ ಡೇಟಾ ಸಂಗ್ರಹಣೆ ಮಾಡಿದೆ.. ಇದರ ಪ್ರಕಾರ ಕರ್ನಾಟಕದಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನಗಳನ್ನು ಗಳಿಸಲಿದೆಯಂತೆ.. ದೇಶಾದ್ಯಂತ ಸುಮಾರು ಹತ್ತು ಕೋಟಿ ಜನರಿಂದ ಅಭಿಪ್ರಾಯ ಸಂಗ್ರಹಣೆ ಮಾಡಲಾಗಿದೆ ಅಂತ ಸಂಸ್ಥೆ ಹೇಳಿಕೊಂಡಿದೆ.. ಈ ಸಮೀಕ್ಷೆ ಪ್ರಕಾರ, ದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 310 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್‌ ನೇತೃತ್ವದ INDI ಒಕ್ಕೂಟ 188 ಹಾಗೂ ಇತರೆ ಪಕ್ಷಗಳು 45 ಸ್ಥಾನಗಳನ್ನು ಗಳಿಸಲಿವೆಯಂತೆ..

ಅಂದರೆ ಬೇರೆಲ್ಲಾ ಸಮೀಕ್ಷಗಳಿಗಿಂತ ವಿಭಿನ್ನವಾಗಿ ಈ ಸಮೀಕ್ಷೆಯ ವರದಿ ನೀಡಲಾಗಿದೆ.. ಹೀಗಾಗಿ ಜನರಲ್ಲಿ ಕುತೂಹಲ ಹೆಚ್ಚು ಮಾಡಿದೆ..

 

Share Post