BengaluruCinemaCrime

ನಿರ್ಮಾಪಕ ಸೌಂದರ್ಯ ಜಗದೀಶ್‌ ಸಾವಿನ ರಹಸ್ಯ ಬಯಲು!

ಬೆಂಗಳೂರು; ಚಿತ್ರ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್‌ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದರು.. ತುಂಬಾ ಚೆನ್ನಾಗಿಯೇ ಇದ್ದ ಸೌಂದರ್ಯ ಜಗದೀಶ್‌ ಆತ್ಮಹತ್ಯೆ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು.. ಇದೀಗ ಅವರ ಸಾವಿನ ರಹಸ್ಯ ಬಯಲಾಗಿದೆ.. ಜಗದೀಶ್‌ ಬರೆದಿಟ್ಟಿದ್ದ ಡೆತ್‌ ನೋಟ್‌ ಆಧಾರದ ಮೇಲೆ ಸೌಂದರ್ಯ ಜಗದೀಶ್‌ ಅವರ ಸಾವಿನ ರಹಸ್ಯವನ್ನು ಪೊಲೀಸರು ಬಯಲು ಮಾಡಿದ್ದಾರೆ..

ಸೌಂದರ್ಯ ಜಗದೀಶ್‌ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು, ಜಗದೀಶ್‌ ಅವರ ಮೂವರು ಬ್ಯುಸಿನೆಸ್‌ ಪಾರ್ಟನರ್ಸ್‌ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿಕೊಂಡಿದ್ದಾರೆ.. ಜಗದೀಶ್‌ ಅವರು ಡೆತ್‌ನೋಟ್‌ನಲ್ಲಿ ಬ್ಯುಸಿನೆಸ್‌ ಲಾಸ್‌ ಬಗ್ಗೆ ಪ್ರಸ್ತಾಪ ಮಾಡಿದ್ದರು.. ಬ್ಯುಸಿನೆಸ್‌ ಪಾರ್ಟನರ್‌ಗಳ ಮೋಸದಿಂದಾಗಿ 60 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅವರು ಬರೆದುಕೊಂಡಿದ್ದರು..

ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು, ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ  ಎಂಬ ಮೂವರು ಬ್ಯುಸಿನೆಸ್‌ ಪಾರ್ಟನರ್‌ಗಳ ವಿರುದ್ಧ ಮಹಾಲಕ್ಷ್ಮೀ ಲೇಔಟ್‌ ಪೊಲೀಸರು ಕೇಸ್‌ ದಾಖಲಿಸಿದ್ದಾರೆ.. ಈ ಮೂವರೊಂದಿಗೆ ಸೇರಿ ಸೌಂದರ್ಯ ಜಗದೀಶ್‌ ಅವರು ಜಗದೀಶ್‌ ಕನ್ಸ್‌ಟ್ರಕ್ಷನ್‌ ಎಂಬ ಕಂಪನಿ ಶುರು ಮಾಡಿದ್ದರು.. ಇದರಲ್ಲಿ ಭಾರೀ ನಷ್ಟವಾಗಿದ್ದು, ಇದಕ್ಕೆ ಪಾಲುದಾರರೇ ಕಾರಣ ಎಂದು ಆರೋಪ ಮಾಡಲಾಗಿದೆ..

 

Share Post