BengaluruLifestyle

ಬೆಂಗಳೂರಲ್ಲಿ ಈ 5 ದಿನ ಬಾರ್‌ಗಳು ಬಂದ್‌; ಮದ್ಯ ಪ್ರಿಯರೆ, ಇದು ಗಮನಕ್ಕೆ ಬಂದಿದೆಯಾ..?

ಬೆಂಗಳೂರು; ಒಂದು ದಿನ ಬಾರ್‌ ಕ್ಲೋಸ್‌ ಆದ್ರೆ ಸಾಕು ಮದ್ಯ ಪ್ರಿಯರು ಪರದಾಡಿಬಿಡ್ತಾರೆ.. ಅಂತಾದ್ರಲ್ಲಿ ಐದು ದಿನ ಮದ್ಯ ಸಿಗದಿದ್ದರೆ ಅವರ ಕತೆ ಏನಾಗಬೇಡ.. ಆದ್ರೆ ಇದು ನಿಜ.. ಜೂನ್‌ 1 ರಿಂದ 6ರವರೆಗೆ ನಿಮಗೆ ಮದ್ಯ ಸಿಗೋದಿಲ್ಲ.. ಬೆಂಗಳೂರನಲ್ಲಿ ಈ ದಿನಗಳಲ್ಲಿ ಬಾರ್‌ಗಳು ಪೂರ್ತಿ ಬಂದ್‌ ಆಗಿರುತ್ತವೆ..

ಜೂನ್ 1 ರಿಂದ 6ರವೆಗೆ ಬೆಂಗಳೂರಿನ ಎಲ್ಲಾ ಬಾರ್ ಅಂಡ್ ರೆಸ್ಟೋರೆಂಟ್ ಗಳು ಮುಚ್ಚಲಿವೆ.. ಇದಕ್ಕೆ ಕಾರಣ ಎಂಎಲ್‌ಸಿ  ಚುನಾವಣೆ ಹಾಗೂ ಲೋಕಸಭಾ ಚುನಾವಣೆ ಮತ ಎಣಿಕೆಯೇ ಕಾರಣ..ಜೂನ್‌ 3ರಂದು ಪದವೀಧರರ ಕ್ಷೇತ್ರಗಳ ಚುನಾವಣೆಯ ಮತದಾನ ನಡೆಯಲಿದೆ.. ಹೀಗಾಗಿ ಜೂನ್‌ 1ರ ಮಧ್ಯಾಹ್ನ 4 ಗಂಟೆಯಿಂದ ಜೂನ್‌ 3ರವರೆಗೆ ಬಾರ್‌ಗಳು ಕ್ಲೋಸ್‌ ಮಾಡುವಂತೆ ಜಿಲ್ಲಾಡಳಿತ ಸೂಚನೆ ಕೊಟ್ಟಿದೆ..

ಇನ್ನು ಇದರ ಮಾರನೆಯ ದಿನ ಅಂದರೆ ಜೂನ್‌ 4ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ.. ಅಂದೂ ಕೂಡಾ ಬಾರ್‌ಗಳು ತೆರೆಯೋದಿಲ್ಲ.. ಜೂನ್‌ 5ರಂದು ಬಾರ್‌ಗಳು ಓಪನ್‌ ಇರುತ್ತವೆ.. ಆದ್ರೆ ನಂತರ ಜೂನ್‌ 6 ರಂದು ಮತ್ತೆ ಕ್ಲೋಸ್‌ ಆಗುತ್ತವೆ.. ಅಂದು ಎಂಎಲ್‌ಸಿ ಚುನಾವಣೆಯ ಮತ ಎಣಿಕೆ ನಡೆಯಲಿದೆ..

 

Share Post