ಕದಿಯಲು ಬಂದವನು ಎಸಿ ಆನ್ ಮಾಡಿ ನಿದ್ದೆಗೆ ಜಾರಿದ; ಬೆಳಗ್ಗೆ ಎದ್ದಾಗ ಮಾವಂದಿರ ಪ್ರತ್ಯಕ್ಷ!
ಲಕ್ನೋ; ಮನೆಯಲ್ಲಿ ಕಳ್ಳತನಕ್ಕೆ ಬಂದ ಕಳ್ಳ ಸೆಕೆಯಾಗುತ್ತಿರುವುದರಿಂದ ಎಸಿ ಆನ್ ಮಾಡುತ್ತಾನೆ.. ಇದರಿಂದಾಗಿ ಆತನಿಗೆ ನಿದ್ದೆ ಬರುತ್ತದೆ.. ಹಾಗೆಯೇ ಮಲಗಿಬಿಡುತ್ತಾನೆ.. ಎದ್ದಾಗ ಆತನ ಎದುರು ಪೊಲೀಸರು ನಿಂತಿರುತ್ತಾರೆ.. ಇದು ಯಾವುದೋ ಕತೆಯಲ್ಲ, ನಿಜವಾಗಿಯೂ ನಡೆದ ಘಟನೆ.. ಇಂತಹದ್ದೊಂದು ಘಟನೆ ಉತ್ತರಪ್ರದೇಶದ ಲಕ್ನೋದ ಇಂದಿರಾನಗರದಲ್ಲಿ ನಡೆದಿದೆ.
ವೈದ್ಯ ವೃತ್ತಿ ಮಾಡುವ ಸುನಿಲ್ ಪಾಂಡೆ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳ ನುಗ್ಗಿದ್ದಾನೆ.. ವೈದ್ಯನ ಮನೆಯಾದ್ದರಿಂದ ಭಾರೀ ಚಿನ್ನಾಭರಣ, ಹಣ ಇರುತ್ತೆ ಎಂದು ಆತ ಬಂದಿದ್ದನಂತೆ.. ಆದ್ರೆ ಮನೆಗೆ ನುಗ್ಗಿದಾಗ ಸೆಕೆ ಆದಂತೆ ಆಗಿದೆ.. ಹೀಗಾಗಿ ಮೊದಲು ಎಸಿ ಆನ್ ಮಾಡಿಕೊಂಡಿದ್ದಾನೆ.. ಇದರಿಂದಾಗಿ ಆತನಿಗೆ ನಿದ್ದೆ ಬಂದಿದ್ದು, ಸ್ವಲ್ಪ ನಿದ್ದೆಗೆ ಜಾರೋಣ ಅಂತ ಶರ್ಟ್ ಬಿಚ್ಚಿ, ತಲೆದಿಂಬು ಹಾಕಿಕೊಂಡು ಮಲಗಿದ್ದಾನೆ..
ಇತ್ತ ಮನೆಯ ಗೇಟ್ ಓಪನ್ ಇದ್ದುದನ್ನು ನೋಡಿದ ಸ್ಥಳೀಯರು ವೈದ್ಯರಿಗೆ ಕರೆ ಮಾಡಿ ಹೇಳಿದ್ದಾರೆ.. ಆ ಅವರು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.. ಪೊಲೀಸರು ಬಂದು ನೋಡಿದರೆ ಕಳ್ಳ ಆರಾಮಾಗಿ ಮಲಗಿದ್ದನಂತೆ.. ಅವರೇ ಎಬ್ಬಿಸಿ ಅರೆಸ್ಟ್ ಮಾಡಿ ಠಾನೆಗೆ ಕರೆದುಕೊಂಡು ಹೋಗಿದ್ದಾರೆ..