CrimeNational

10ನೇ ಮಹಡಿಯಿಂದ ಬಿದ್ದ IAS ಅಧಿಕಾರಿ ಮಗಳ ಸಾವು; ಬಿದ್ದಿದ್ದಾ, ನೂಕಿದ್ದಾ..?

ಮುಂಬೈ; ಮುಂಬೈನ ಕಫ್ ಪರೇಡ್‌ನಲ್ಲಿನ ಸುನೀತಿ ಬಿಲ್ಡಿಂಗ್​​ ನ ಹತ್ತನೇ ಮಹಡಿಯಿಂದ ಬಿದ್ದು IAS ಅಧಿಕಾರಿಯ ಪುತ್ರಿ ಸಾವನ್ನಪ್ಪಿದ್ದಾಳೆ.. ಡೆತ್‌ನೋಟ್‌ ಬರೆದಿಟ್ಟು ಕಟ್ಟಡದಿಂದ ಕೆಳಗೆ ಜಿಗಿಯಲಾಗಿದೆ.. ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ಅಲ್ಲಿದ್ದವರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ..

27 ವರ್ಷದ ಲಿಪಿ ಎಂಬಾಕೆಯೇ ಸಾವನ್ನಪ್ಪಿದ ಯುವತಿ.. ಆಕೆ ಡೆತ್‌ನೋಟ್‌ ಬರೆದಿಟ್ಟರೂ ಸಾವಿನ ಬಗ್ಗೆ ಕೆಲವು ಅನುಮಾನಗಳಿವೆ.. ಈಕೆ ಹರಿಯಾಣದ ಸೋನಿಪತ್​ನಲ್ಲಿ ಎಲ್​​ಎಲ್​​ಬಿ ವ್ಯಾಸಂಗ ಮಾಡುತ್ತಿದ್ದಳು.. ಈ ವರ್ಷದಲ್ಲಿ ಸರಿಯಾಗಿ ವಿದ್ಯಾಭ್ಯಾಸ ಮಾಡಿದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.. ಕಂಟೆಂಟ್ ರೈಟರ್ ಮತ್ತು ಸೌಂದರ್ಯ ಸಲಹೆಗಾರರಾಗಿ ಕೆಲಸ ಮಾಡಿದ್ದ ಲಿಪಿ ಈಗ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಳು..

ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ನಾನೇ ಕಾರಣ.. ಯಾರನ್ನೂ ದೂಷಿಸಬೇಡಿ ಎಂದು ಬರೆದಿದ್ದಾಳೆ.. ಯಾಕೆ ಈ ಸಾಲುಗಳು ಬರೆದಳು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.. ಅಂದಹಾಗೆ ಲಿಪಿ ಮಹಾರಾಷ್ಟ್ರದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿ ವಿಕಾಸ್ ರಸ್ತೋಗಿ ಹಾಗೂ ಐಎಎಸ್​ ಆಫೀಸರ್​ ರಾಧಿಕಾ ರಸ್ತೋಗಿ ಅವರ ಮಗಳು ಎಂದು ತಿಳಿದುಬಂದಿದೆ..

 

Share Post