BengaluruCrime

ಕೊನೆಗೂ ಬಯಲಾಯ್ತು ವಕೀಲೆ ಚೈತ್ರಾ ಗೌಡ ಸಾವಿನ ರಹಸ್ಯ!; FSL ವರದಿಯಲ್ಲೇನಿದೆ ಗೊತ್ತಾ..?

ಬೆಂಗಳೂರು; ಕೆಎಎಸ್‌ ಅಧಿಕಾರಿ ಪತ್ನಿ ಹಾಗೂ ವಕೀಲೆ ಚೈತ್ರಾಗೌಡ ಸಾವಿನ ರಹಸ್ಯ ಕೊನೆಗೂ ಬಯಲಾಗಿದೆ.. ಹೈಕೋರ್ಟ್‌ ವಕೀಲೆಯಾಗಿರುವ ಚೈತ್ರಾ ಅವರು ಕೆಲ ದಿನಗಳ ಹಿಂದೆ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.. ಸಂಜಯನಗರ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ನಲ್ಲಿ ಅವರ ಮೃತದೇಹ ಸಿಕ್ಕಿತ್ತು.. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಗೊತ್ತಾಗಿದ್ದರೂ, ಸಾವನ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.. ಇದು ಕೊಲೆ ಇರಬಹುದೇ ಎಂದು ಪೊಲೀಸರು ತನಿಖೆ ಕೈಗೊಂಡಿದ್ದರು.. ಇದೀಗ ಚೈತ್ರಾಗೌಡ ಅವರ ಸಾವಿನ ರಹಸ್ಯ ಬಯಲಾಗಿದೆ..

ವಕೀಲೆ ಚೈತ್ರಾ ಗೌಡ ಅವರದ್ದು ಕೊಲೆಯಲ್ಲ ಆತ್ಮಹತ್ಯೆ ಅನ್ನೋದು ಈಗ ಸಾಬೀತಾಗಿದೆ.. ಚೈತ್ರಾ ಅವರು ತಾವೇಗಿಯೇ ನೇಣು ಬಿಗಿದುಕೊಂಡಿದ್ದಾರೆ ಎಂಬುದು ತನಿಖೆಯಲ್ಲಿ ಬಯಲಾಗಿದೆ.. ಮರಣೋತ್ತರ ಪರೀಕ್ಷೆಯಲ್ಲಿ ಚೈತ್ರಾಗೌಡ ಅವರೇ ಸ್ವತಃ ನೇಣು ಬಿಗಿದುಕೊಂಡಿದ್ದಾರೆ ಎಂಬುದು ಗೊತ್ತಾಗಿದೆ.. ಇನ್ನು ಸ್ಥಳದಲ್ಲಿ ಡೆತ್‌ ನೋಟ್‌ ಸಿಕ್ಕಿತ್ತು.. ಅದರ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ಮಾಡಲು ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು.. ಎಫ್‌ಎಸ್‌ಎಲ್‌ ವರದಿ ಕೂಡಾ ಬಂದಿದ್ದು, ಡೆತ್‌ನೋಟ್‌ನಲ್ಲಿರುವ ಬರವಣಿಗೆ ಚೈತ್ರಾ ಅವರದ್ದೇ ಅನ್ನೋದು ದೃಢವಾಗಿದೆ..

ವಕೀಲೆ ಚೈತ್ರಾ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.. ಪೊಲೀಸ್‌ ತನಿಖೆ ವೇಳೆಯೂ ಇದೇ ವಿಚಾರ ತಿಳಿದುಬಂದಿದೆ.. ಕೆಎಎಸ್​ ಅಧಿಕಾರಿಯ ಪತ್ನಿಯೂ ಆಗಿದ್ದ ಚೈತ್ರಾ ಗೌಡ, ಮೇ 11 ರಂದು ಸಂಜಯನಗರ ಠಾಣಾ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್​‌ನಲ್ಲಿ ನೇಣಿಗೆ ಶರಣಾಗಿದ್ದರು. ಅವರಿಗೆ 35 ವರ್ಷ ವಯಸ್ಸಾಗಿತ್ತು..

 

Share Post