NationalPolitics

ರಾಷ್ಟ್ರೀಯ ಪಕ್ಷಗಳು ಮೂರನೇ ಪಾರ್ಟಿ ಮುಗಿಸೋಕೇ ನೋಡೋದು ಯಾಕೆ ಗೊತ್ತಾ..?

ಬೆಂಗಳೂರು; ರಾಜ್ಯಗಳಲ್ಲಿ ಸಾಮಾನ್ಯವಾಗಿ ಎರಡು ಪ್ರಬಲ ರಾಜಕೀಯ ಪಕ್ಷಗಳು ಇರುವಂತೆ ನೋಡಿಕೊಳ್ಳಲಾಗುತ್ತದೆ.. ಮೂರನೇ ಪಕ್ಷ ಪ್ರಬಲವಾಗುತ್ತಿದೆ ಅಂದ್ರೆ ಅದನ್ನು ಮುಗಿಸೋ ಪ್ರಯತ್ನಗಳೇ ಹೆಚ್ಚಾಗಿ ನಡೆಯುತ್ತವೆ.. ದೇಶದ ಎಲ್ಲಾ ರಾಜ್ಯಗಳಲ್ಲೂ ಇದು ಇದ್ದೇ ಇದು.. ಎರಡು ಪ್ರಬಲ ಪಕ್ಷಗಳು ಬೆಳೆಯುತ್ತಿರುವ ಮೂರನೇ ಪಕ್ಷಕ್ಕೆ ಇನ್ನಿಲ್ಲದ ಕಾಟ ಕೊಟ್ಟು ಅದು ಇಲ್ಲದಂತೆ ಮಾಡುವ ಪ್ರಯತ್ನ ಮಾಡ್ತಾರೆ.. ಯಾಕಂದ್ರೆ ಮೂರನೇ ಪಕ್ಷ ಇದ್ದಷ್ಟೂ ಎರಡೂ ಪಕ್ಷಗಳಿಗೆ ತೊಂದರೆಯಾಗುತ್ತದೆ.. ಪ್ರತಿ ಬಾರಿಯೂ ಸರ್ಕಾರ ರಚನೆ ಮಾಡೋದಕ್ಕೆ ಪರದಾಟ ನಡೆಸಬೇಕಾಗುತ್ತದೆ..

3 ಪಕ್ಷ ಇದ್ದ ಕಡೆ ಬಹುಮತ ಕಷ್ಟ ಕಷ್ಟ..!;

ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಅಣ್ಣಾ ಡಿಎಂಕೆ ಪಕ್ಷಗಳಿವೆ.. ಕೇರಳದಲ್ಲಿ ಕಾಂಗ್ರೆಸ್‌ ಹಾಗೂ ಎಡ ಪಕ್ಷಗಳಿವೆ.. ಆಂಧ್ರಪ್ರದೇಶದಲ್ಲಿ ಟಿಡಿಪಿ ಹಾಗೂ ವೈಎಸ್‌ಆರ್‌ಸಿಪಿ ಪಕ್ಷಗಳಿವೆ.. ಹೀಗಾಗಿ ಇಲ್ಲಿ ಯಾವುದಾದರೂ ಒಂದು ಪಕ್ಷಕ್ಕೆ ಬಹುಮತ ಬರುತ್ತದೆ.. ಐದು ವರ್ಷ ನಿರಾತಂಕವಾಗಿ ಅಧಿಕಾರ ನಡೆಸುತ್ತವೆ.. ಇಲ್ಲಿ ಅತಂತ್ರ ಪರಿಸ್ಥಿತಿ ಎಂಬ ಪ್ರಶ್ನೆಯೇ ಬರೋದಿಲ್ಲ.. ಆದ್ರೆ ಪ್ರಬಲವಾದಂತಹ ಮೂರನೇ ಪಕ್ಷ ಇದ್ದರೆ ಅಲ್ಲಿ ಯಾರಿಗೂ ಬಹುಮತ ಸಿಗೋದಿಲ್ಲ.. ಸೀಟುಗಳು ಮೂರು ಪಾರ್ಟಿಗಳಿಗೂ ಹಂಚಿಹೋಗಿ, ಯಾವುದಕ್ಕೂ ಬಹುಮತ ಬರೋದಿಲ್ಲ.. ಇದರಿಂದಾಗಿ ಸ್ವಲ್ಪ ಕಡಿಮೆ ಸೀಟು ಗಳಿಸಿರುವ ಪಕ್ಷದ ಬೆಂಬಲಕ್ಕಾಗಿ ಎರಡು ಅತಿದೊಡ್ಡ ಪಕ್ಷಗಳು ಕಾಯಬೇಕಾಗುತ್ತದೆ.. ಅವರ ಬಾಗಿಲು ಬಡಿಯಬೇಕಾಗುತ್ತದೆ.. ಹೀಗಾಗಿ, ಅನೇಕ ಕಡೆ ಮೂರನೇ ಪಾರ್ಟಿ ಹುಟ್ಟು ಹಾಕಲು ಹೋದಾಗಲೇ ಅದನ್ನು ಚಿವುಟೋ ಪ್ರಯತ್ನಗಳು ನಡೆಯುತ್ತವೆ.. ಇದರ ನಡುವೆಯೂ ಮೂರನೇ ಪಾರ್ಟಿ ಎದ್ದು ಬಂದರೆ, ಆ ರಾಜ್ಯದಲ್ಲಿ ಅತಂತ್ರ ಸರ್ಕಾರವೇ ಹೆಚ್ಚು ಬರೋದು.. ಈ ಕಾರಣಕ್ಕಾಗಿ ಎರಡು ಪ್ರಬಲ ಪಕ್ಷಗಳು ಮೂರನೇ ಪಾರ್ಟಿಯನ್ನು ಮುಗಿಸಲು ಪ್ರಯತ್ನ ಮಾಡುತ್ತಲೇ ಇರುತ್ತವೆ..

ಜೆಡಿಎಸ್‌ ಮುಗಿಸುವ ಪ್ರಯತ್ನ;

ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಜೊತೆಗೆ ಜೆಡಿಎಸ್‌ ಪ್ರಬಲವಾಗಿದೆ… ಸದ್ಯ ಜೆಡಿಎಸ್‌ ಪ್ರಾಬಲ್ಯ ಕುಸಿತ ಕಂಡಿದ್ದರೂ ಕೂಡಾ, ಮನಸ್ಸು ಮಾಡಿದರೆ ಜೆಡಿಎಸ್‌ ನಾಯಕರು ರಾಜ್ಯ ವಿಧಾನಸಭೆಯಲ್ಲಿ 40 ಸ್ಥಾನಗಳನ್ನು ಗಳಿಸೋದು ಕಷ್ಟವೇನಲ್ಲ.. ಒಂದು ವೇಳೆ ಜೆಡಿಎಸ್‌ 40 ಸ್ಥಾನ ಗಳಿಸಿದರೆ ರಾಜ್ಯ ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿ ಏರ್ಪಡುತ್ತದೆ.. ಹೀಗಾಗಿ ಬಹುತೇಕ ಸಂದರ್ಭದಲ್ಲಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಬಂದಿದೆ.. ಆಗೆಲ್ಲಾ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ಜೆಡಿಎಸ್‌ ಬೆಂಬಲ ಪಡೆದು ಅಧಿಕಾರ ನಡೆಸಿವೆ..

ಜೆಡಿಎಸ್‌ ಬೆಂಬಲದೊಂದಿಗೆ ಅಧಿಕಾರ ನಡೆಸಿರುವ ಎರಡೂ ಪಕ್ಷಗಳಿಗೆ ಜೆಡಿಎಸ್‌ ಬೇಡವಾಗಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.. ಹೀಗಾಗಿ ಜನತಾದಳ ಇರುವಾಗಿನಿಂದಲೂ ಅದರ ಶಕ್ತಿ ಕುಂದಿಸುವ ಪ್ರಯತ್ನ ನಡೆದಿದೆ..

ಮೊದಲು ಇದ್ದದ್ದು ದಳ ಹಾಗೂ ಕಾಂಗ್ರೆಸ್‌;

ಹಾಗೆ ನೋಡಿದರೆ ರಾಜ್ಯದಲ್ಲಿ ಈ ಮೊದಲು ಇದ್ದದ್ದು ಕಾಂಗ್ರೆಸ್‌ ಹಾಗೂ ಜನತಾ ದಳ ಮಾತ್ರ.. ಜನತಾ ದಳ ವಿಭಜನೆಯಾದಾಗಿನಿಂದ ಅದರ ಪ್ರಾಬಲ್ಯ ಕಡಿಮೆಯಾಗುತ್ತಾ ಬಂತು.. ಈ ಸಂದರ್ಭದಲ್ಲಿ ಬಿಜೆಪಿ ಚಿಗುರಿಕೊಳ್ತು.. ಹೀಗಾಗಿ ರಾಜ್ಯದಲ್ಲಿ ಈಗ ಕಾಂಗ್ರೆಸ್‌ ಹಾಗೂ ಬಿಜೆಪಿ ಪ್ರಬಲವಾಗಿದೆ.. ಜೆಡಿಎಸ್‌ ಮೂರನೇ ಪಕ್ಷವಾಗಿದೆ.. ಹೀಗಾಗಿ ಮೂರನೇ ಪಕ್ಷವನ್ನು ಬೆಳೆಯದಂತೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪಗಳು ಮೊದನಿಂದಲೂ ಕೇಳಿಬರುತ್ತಿವೆ.. ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣದ ನಂತರ ಈ ಬಗ್ಗೆ ಇನ್ನಷ್ಟು ಆರೋಪಗಳು ಕೇಳಿಬರುತ್ತಿವೆ..

ಒಮ್ಮೆ ಕರ್ನಾಟಕದಲ್ಲಿ ಬಿಜೆಪಿ ಮೂರನೇ ಪಕ್ಷವಾಗಿತ್ತು.. ಅದು ಪ್ರಬಲವಾಗಿ ಬೆಳೆಯಲು ದಶಕಗಳೇ ತೆಗೆದುಕೊಂಡವು.. ಬಿಜೆಪಿ ಮೂರನೇ ಪಾರ್ಟಿಯಾಗಿದ್ದಾಗ ಅದನ್ನು ಬೆಳೆಯದಂತೆ ತುಳಿಯುವ ಪ್ರಯತ್ನವೂ ನಡೆದಿತ್ತು.. ಎಲ್ಲದರ ನಡುವೆ ಬಿಜೆಪಿ ಬೆಳೆದು ಅಧಿಕಾರ ಹಿಡಿಯಿತು.. ಇದರಿಂದ ರಾಜ್ಯದಲ್ಲಿ ಮೂರು ಪಕ್ಷಗಳು ಪ್ರಬಲವಾದವು.. ಇದರಿಂದಾಗಿ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಕಾಮನ್‌ ಆಯ್ತು…

 

Share Post