CrimeDistricts

ಆಕಸ್ಮಿಕ ಬೆಂಕಿ; 40ಕ್ಕೂ ಹೆಚ್ಚು ಕುರಿಗಳು ಸಜೀವದಹನ

ಚಾಮರಾಜನಗರ; ಕುರಿದೊಡ್ಡಿಗೆ ಆಕಸ್ಮಿಕ ಬೆಂಕಿ ತಗುಲಿ ನಲವತ್ತಕ್ಕೂ ಹೆಚ್ಚು ಕುರಿಗಳು ಸಜೀವದಹನವಾಗಿರುವ ಘಟನೆ ಇಲ್ಲಿನ ಕೋಡಿಉಗನೆ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ಮಹಾದೇವ ಎಂಬುವವರಿಗೆ ಸೇರಿದ ಕುರಿಗಳು ಇವಾಗಿದ್ದು, ರಾತ್ರಿ ದೊಡ್ಡಿಯಲ್ಲಿ ಇವುಗಳನ್ನು ಕೂಡಿಹಾಕಲಾಗಿತ್ತು. ಈ ವೇಳೆ ಆಕಸ್ಮಿಕ ಬೆಂಕಿ ಬಿದ್ದು, ಎಲ್ಲವೂ ಸಾವನ್ನಪ್ಪಿವೆ.

    ಇವರ ಕುರಿದೊಡ್ಡಿಯಲ್ಲಿ 40 ಕ್ಕೂ ಹೆಚ್ಚು ಕುರಿಗಳಿದ್ದವು. ಇದ್ದಕ್ಕಿದ್ದಂತೆ ದೊಡ್ಡಯಲ್ಲಿ ಬೆಂಕಿ ಕಾಣಿಸಿಕೊಳ್ತು. ನೋಡನೋಡುತ್ತಿದ್ದಂತೆ ಬೆಂಕಿ ದೊಡ್ಡ ತುಂಬಾ ವ್ಯಾಪಿಸಿದೆ. ಒಣ ಹುಲ್ಲು ಹೆಚ್ಚಿದ್ದರಿಂದಾಗಿ ಬೆಂಕಿ ಬಹುಬೇಗೆ ಎಲ್ಲಾ ಕಡೆ ಹರಡಿದೆ. ಕುರಿಗಳ ಮಾಲೀಕ ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟರಾದರೂ, ಯಾವುದೇ ಪ್ರಯೋಜನವಾಗಲಿಲ್ಲ.

ಆದರೆ, ಎಲ್ಲರೂ ಸೇರಿ ನೀರು ತಂದು ಸುರಿದಿದ್ದರಿಂದ ಇತರೆ ಕುರಿದೊಡ್ಡಿಗಳು ಬೆಂಕಿ ವ್ಯಾಪಿಸುವುದು ತಪ್ಪಿದೆ. ಘಟನೆಗೆ ಕಾರಣ ಎಂಬುದು ಇನ್ನೂ ತಿಳಿದುಬಂದಿಲ್ಲ.

 

Share Post