Bengaluru

ಡಿಜಿಟಲ್‌ ರೂಪದಲ್ಲಿ ರೈತರಿಗೆ ದಾಖಲೆ ಮಾಹಿತಿ :ಕಂದಾಯ ಸಚಿವ

ಬೆಂಗಳೂರು: ರಾಜ್ಯದೆಲ್ಲೆಡೆ ರೈತರು ಭೂಮು ಬಗ್ಗೆ ಮಾಹಿತಿ ಪಡೆಯುವುದಕ್ಕೆ ತಾಲೂಕು, ಜಿಲ್ಲಾ ಕಚೇರಿಗಳೊಗೆ ಅಲೆದಾಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಹೊಸ ತಂತ್ರವನ್ನು ರೂಪಿಸಿದೆ. ಈ ಬಗ್ಗೆ ಮಾತನಾಡಿದ ಕಂದಾಯ ಸಚಿವ ಆರ್‌ ಅಶೋಕ್.‌ ಎಲ್ಲಾ ದಾಖಲೆಗಳು ಸಂಪೂರ್ಣವಾಗಿ ರೈತರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ತೆಯನ್ನು ಮಾಡುತ್ತೇವೆ. ಎಲ್ಲಾ ದಾಖಲೆಗಳು ಡಿಜಿಟಲ್‌ ರೂಪದಲ್ಲಿ ರೈತರ ಕೈ ಸೇರಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಭೂ ದಾಖಲೆ ಪಡೆಯಲು ಸುಮಾರು 40 ರಿಂದ 50 ಲಕ್ಷ ರೈತ ಕುಟುಂಬಗಳು ಪರದಾಡುತ್ತಿದ್ದಾರೆ. ಹೀಗಾಗಿ ಈ ವರ್ಷದಿಂದ ಎಲ್ಲಾ ದಾಖಲೆಗಳು ರೈತನ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ತೆ ಮಾಡುತ್ತೇವೆ. ಒಂದೇ ದಿನದಲ್ಲಿ ದಾಖಲೆ ಪತ್ರ ಕೈ ಸೇರಬೇಕು. ಅವರ ಭೂಮಿ ಬಗ್ಗೆ ಮಾಹಿತಿ ಇಲ್ಲದ ರೈತರಿಗೆ ಮಾಹಿತಿ ಹಕ್ಕು ನೀಡುತ್ತೇವೆ. ಇದೆಲ್ಲಾ ಕೆಲಸ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ರೈತರಿಗೆ ನೀಡಲಾಗುವುದು. ದಾಖಲೆ ಸಿದ್ದವಾದ ಬಳಿಕ ನಾನು ಮತ್ತು ಸಿಎಂ ಬೊಮ್ಮಾಯಿಯವರು ರೈತರ ಮನೆ ಬಾಗಿಲಿಗೆ ತೆರಳಿ ದಾಖಲೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತೇವೆ ಎಂದಿದ್ದಾರೆ.

ಮುಂದುವರೆದು ಇನಾಮು ಭೂಮಿ ನೋಂದಣಿಗೆ ರಾಜ್ಯದ ಬಡ ರೈತರಿಗೆ ಮತ್ತೊಮ್ಮೆ ಅವಕಾಶ ಕಲಿಸಲಾಗುವುದು. ಮೊದಲು ರಾಜ್ಯದ ಐದು ಜಿಲ್ಲೆಗಳಲ್ಲಿ ಡ್ರೋಣ್‌ ಮೂಲಕ ಸರ್ವೆ ಕಾರ್ಯ ಮಾಡಲಾಗುವುದು. ಕೇಂದ್ರ ಸರ್ಕಾರದ ಅನುದಾನದಲ್ಲಿ ಸರ್ವೆ ಕಾರ್ಯ ನಡೆಸಲಾಗುವುದು. ಬ್ರಿಟೀಷರ ಕಾಲದ ಬಳಿಕ ಮತ್ತೆ ರಾಜ್ಯದಲ್ಲಿ ಸರ್ವೆ ಕಾರ್ಯ ನಡೆದಿಲ್ಲ. ಈ ಬಾರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ವೆ ನಡೆಸಿ. ದಾಖಲೆಗಳನ್ನು ಡಿಜಿಟಲ್‌ ರೂಪದಲ್ಲು ಪೂರೈಸಲು ಸಿದ್ದತೆ ನಡೆಸಲಾಗುತ್ತದೆ ಎಂದು ಕಂದಾಯ ಸಚಿವ ಆರ್ಾಶೋಕ್‌ ಮಾಹಿತಿ ನೀಡಿದರು.

Share Post