BengaluruEconomy

ಬ್ರ್ಯಾಂಡ್ ರ‍್ಯಾಂಕಿಂಗ್​ನಲ್ಲಿ ಮೇಲಕ್ಕೇರಿದ ನಂದಿನಿ

ಬೆಂಗಳೂರು; ಅಮುಲ್‌ ಉತ್ಪನ್ನಗಳು ರಾಜ್ಯಕ್ಕೆ ಕಾಲಿಡುತ್ತಿದ್ದು, ಇದದರಿಂದ ನಂದಿನಿಗೆ ನಷ್ಟವಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದ್ರೆ ನಂದಿನಿ ಬ್ರಾಂಡ್‌ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತಿದೆ. ಫಾಸ್ಟ್ ಮೂವಿಂಗ್ ಕನ್​ಸ್ಯೂಮರ್ ಗೂಡ್ಸ್ ಬ್ರ್ಯಾಂಡ್ ರ‍್ಯಾಂಕಿಂಗ್​ನಲ್ಲಿ ಇನ್ನೂ ಒಂದು ಸ್ಥಾನ ಮೇಲಕ್ಕೇರಿದೆ.

ಕಳೆದ ವರ್ಷದಲ್ಲಿ ನಂದಿನಿ ಬ್ರ್ಯಾಂಡ್‌ ಏಳನೇ ಸ್ಥಾನದಲ್ಲಿತ್ತು. ಆದ್ರೆ ಇದೀಗ ಅದು ಆರನೇ ಸ್ಥಾನಕ್ಕೇರಿದೆ. ಇನ್ನು ಕಳೆದ ವರ್ಷ ಅಮುಲ್‌ ಎರಡನೇ ಸ್ಥಾನದಲ್ಲಿತ್ತು. ಇದೀಗ ಅದು ಮೂರನೇ ಸ್ಥಾನಕ್ಕೆ ಕುಸಿದಿದೆ. ಅಂದರೆ ಅಮುಲ್‌ ಜನಪ್ರಿಯತೆ ಕಡಿಮೆಯಾಗುತ್ತಿದ್ದು, ನಂದಿನ ಜನಪ್ರಿಯತೆ ಹಾಗೂ ಮಾರಾಟ ಹೆಚ್ಚಾಗುತ್ತಿದೆ ಎಂದರ್ಥ.

 

Share Post