CrimeNational

ನಾಯಿಯನ್ನು ನೇಣು ಹಾಕಿ ಕೊಂದು ವಿಕೃತಿ ಮೆರೆದ ಪುಂಡರು

ಗಾಜಿಯಾಬಾದ್; ವಿಕೃತ ಮನಸ್ಸಿನವರು ಮಾಡಬಾರದ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ.. ಅಂತವರ ಆಗಿಂದಾಗ್ಗೆ ಶಿಕ್ಷೆಗಳು ಜಾರಿಯಾಗುತ್ತಿದ್ದರೂ ವಿಕೃತಿಗಳು ಮಾತ್ರ ನಿಲ್ಲುತ್ತಿಲ್ಲ. ಗಾಜಿಯಾಬಾದ್‌ನಲ್ಲಿ ಅಂತಾಹದ್ದೇ ಒಂದು ಪೈಶಾಚಿಕ ಕೃತ್ಯ ನಡೆದಿದೆ. ಮೂವರು ಪುಂಡರು ಜೀವನ ನಾಯಿಯನ್ನು ನೇತು ಹಾಕಿ ವಿಕೃತಿ ಮೆರೆದಿದ್ದಾರೆ. ನಾಯಿಯ ಕತ್ತಿಗೆ ಹಗ್ಗ ಕಟ್ಟಿ ನೇತು ಹಾಕಿದ್ದಾರೆ. ಅಮಾನುಷವಾಗಿ ನಾಯಿಯನ್ನು ಕೊಂದಿದ್ದಲ್ಲದೆ ಅದನ್ನು ವಿಡಿಯೋ ಕೂಡಾ ಮಾಡಿದ್ದಾರೆ. ವಿಡಿಯೋ ವೈರಲ್‌ ಆಗುತ್ತಿದ್ದ ಪೊಲೀಸರ ಎಚ್ಚೆತ್ತಿದ್ದಾರೆ. ಆರೋಪಿಗಳಿಗಾಗಿ ಹುಡುಕಾಟ ಶುರು ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸಾರ್ವಜನಿಕರು ಗರಂ ಆಗಿದ್ದಾರೆ. ಪುಂಡರನ್ನು ಬಂಧಿಸುವಂತೆ ಆಗ್ರಹ ಮಾಡುತ್ತಿದ್ದಾರೆ. ಗಾಜಿಯಾಬಾದ್‌ನ ಲೋನಿ ಪೊಲೀಸ್ ಠಾಣೆ ವ್ಯಾಪ್ತಿಯ ಎಲೈಚಿಪುರದಲ್ಲಿ ಇಂತಹ ಕೃತ್ಯ ಎಸಗಲಾಗಿದೆ. ವೈರಲ್‌ ಆಗಿರುವ ವಿಡಿಯೋದಲ್ಲಿ ಮೂವರು ಕಾಣಿಸಿಕೊಂಡಿದ್ದು, ಇದರಲ್ಲಿ ಇಬ್ಬರು ನಾಯಿಗೆ ಹಗ್ಗ ಕಟ್ಟಿ ಹತ್ಯೆ ಮಾಡುತ್ತಿರುವುದು ಕಂಡುಬಂದಿದೆ. ಮತ್ತೊಬ್ಬ ವ್ಯಕ್ತಿ ಸ್ಥಳದಲ್ಲಿ ನೋಡುತ್ತಾ ನಿಂತಿದ್ದಾನೆ.

Share Post