NationalPolitics

ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ರವೀಂದ್ರ ಜಡೇಜಾ ಪತ್ನಿ

ಗಾಂಧಿನಗರ; ಗುಜರಾತ್‌ನಲ್ಲಿ ಚುನಾವಣಾ ಕಣ ರಂಗೇರಿದೆ. ಇಲ್ಲಿ ಜಾಮ್‌ ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಟೀಂ ಇಂಡಿಯಾ ಆಟಗಾರ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರು ಕಣಕ್ಕಿಳಿದಿದ್ದಾರೆ. ಇಂದು ಭಾರಿ ಮೆರವಣಿಗೆಯೊಂದಿಗೆ ಅವರು ತಮ್ಮ ನಾಮಪತ್ರವನ್ನು ಸಲ್ಲಿಕೆ ಮಾಡಿದರು. ಈ ಮೂಲಕ ಜಾಮ್‌ ನಗರ ಉತ್ತರ ಕ್ಷೇತ್ರದ ರಾಜಕೀಯ ಕುತೂಹಲಕ್ಕೆ ಕಾರಣವಾದಂತಾಗಿದೆ.

ಕರ್ಣಿ ಸೇನೆಯ ಮಹಿಳಾ ಮುಖ್ಯಸ್ಥೆಯಾಗಿದ್ದ ರಿವಾಬಾ 2019ರ ಲೋಕಸಭೆ ಚುನಾವಣೆಗೂ ಮುಂಚೆ ಬಿಜೆಪಿ ಸೇರ್ಪಡೆಯಾಗಿದ್ದರು. ಈ ಬಾರಿ ಗುಜರಾತ್‌ನಲ್ಲಿ ಬಿಜೆಪಿ ಯುವ ಸಮುದಾಯಕ್ಕೆ ಹೆಚ್ಚು ಮಣೆ ಹಾಕಿದೆ. ಈ ಹಿನ್ನೆಲೆಯಲ್ಲಿ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಅವರಿಗೂ ಟಿಕೆಟ್‌ ನೀಡಲಾಗಿದೆ. ಜಾಮ್‌ನಗರದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ ಪ್ರಚಂಡ ಬಹುಮತದಿಂದ ಗೆಲ್ಲೋದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share Post